ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ಹಿರಿಯ ನಟ ಸಂಜಯ ದತ್, ಉಸಿರಾಟದ ತೊಂದರೆಯಿಂದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ರು. ಈಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವ ವಿಚಾರ ತಿಳಿದು ಬಂದಿದೆ. ಅಲ್ದೇ, ಅದು 3ನೇ ಹಂತದಲ್ಲಿದೆ ಎಂದು ಹೇಳಲಾಗ್ತಿದೆ.
ಕ್ಯಾನ್ಸರ್ ಬಗ್ಗೆ ಸಂಜಯ ದತ್ ಏನೂ ಹೇಳಿಲ್ಲ. ಚಿಕಿತ್ಸೆ ದೃಷ್ಟಿಯಿಂದ ಚಿತ್ರರಂಗದಿಂದ ಸ್ವಲ್ಪ ಗ್ಯಾಪ್ ತೆಗೆದುಕೊಳ್ಳುತ್ತೇನೆ. ನನ್ನ ಕುಟುಂಬ ಹಾಗೂ ಗೆಳೆಯರು ನನ್ನ ಜೊತೆಗಿದ್ದಾರೆ. ಬೇಗ ವಾಪಸ್ ಆಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ನಟ ಸಂಜು ಬಾಬಾಗೆ ಕ್ಯಾನ್ಸರ್ ಇರುವುದು ತಿಳಿದು ಮಾಜಿ ಕ್ರಿಕೆಟಿಗ ಯುವರಾಜ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕ್ಯಾನ್ಸರ್ ನೋವು ಏನು ಅನ್ನೋದು ನನಗೆ ಗೊತ್ತು. ನೀವು ಯಾವತ್ತಿದ್ರೂ ಫೈಟರ್. ತುಂಬಾ ಸ್ಟ್ರಾಂಗ್ ಇದ್ದೀರಿ. ಆಗದಷ್ಟು ಬೇಗ ಗುಣಮುಖರಾಗಿ ಬನ್ನಿ. ನಿಮ್ಗೆ ಶುಭವಾಗಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಅಂತಾ ಯುವ್ವಿ ಟ್ವೀಟ್ ಮಾಡಿದ್ದಾರೆ.