ಪ್ರಜಾಸ್ತ್ರ ಕ್ರೀಡಾ ಸುದ್ದಿ
ಪ್ರಯಾಗ್ ರಾಜ್: ಆಸ್ಪತ್ರೆಯ ಹತ್ತಿರ ಸುಮಾರು 70 ವರ್ಷದ ವೃದ್ಧೆಯೊಬ್ಬರು ನಿರಾಶ್ರಿತರಾಗಿ ಮಲಗಿದ್ರು. ಅವರ ಮೇಲೆ ನಿನ್ನೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡು ಹಲ್ಲೆ ಮಾಡಿದ್ದ. ಈತನನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿರುವ ಸ್ವರೂಪರಾಣಿ ನೆಹರು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಸಂಜಯ ಮಿಶ್ರಾ ಬಂಧಿತ ಆರೋಪಿಯಾಗಿದ್ದಾನೆ. ಆಸ್ಪತ್ರೆಯ ಟ್ರಾಮಾ ಕೇಂದ್ರದ ಬಳಿ ವೃದ್ಧೆ ಆಶ್ರಯ ಕೇಳಿದ್ದಾಳೆ. ಆಕೆ ಎಷ್ಟೇ ಬೇಡಿಕೊಂಡ್ರೂ ಆಶ್ರಯ ನೀಡಿದೆ ಅಮಾನುಷವಾಗಿ ನಡೆದುಕೊಂಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ನಂತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ಸಂಜಯ ಮಿಶ್ರಾನನ್ನ ಬಂಧಿಸಿದ್ದಾರೆ. ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳದ ಏಜೆನ್ಸಿಯನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಕನಿಷ್ಠ ಸೌಜನ್ಯವನ್ನೂ ಮರೆತು ಜನರು ವರ್ತಿಸ್ತಿರುವುದು ನಿಜಕ್ಕೂ ನೋವಿನ ಸಂಗತಿ.