ರಾಷ್ಟ್ರೀಯ ಲೋಕ್ ಅದಾಲತ್

256

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹೈಕೋರ್ಟ್ ಆದೇಶದ ಅನುಸಾರ ಸೆಪ್ಟೆಂಬರ್ 9, 2023ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ. ಇಲ್ಲಿನ ಕೋರ್ಟ್ ಆವರಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಐ.ಪಿ ನಾಯಕ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ.ಕೆ ಮೊಗೇರ್, ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಭೂಸಗೊಳ ಅವರು ಮಾಹಿತಿ ನೀಡಿದರು.

ರಾಜಿ ಸಂಧಾನ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಬಗೆಹರಿಸಲಾಗುವುದು. ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಾತಿ, ಅಪಘಾತ ಪರಿಹಾರ, ಕಾರ್ಮಿಕ ವಿವಾದ, ವೈವಾಹಿಕ ಸಂಬಂಧ ಹಾಗೂ ವಾಜ್ಯಪೂರ್ವ ಪ್ರಕರಣಗಳನ್ನು ಸಹ ಎರಡು ಕಡೆಯವರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಬಗೆಹರಿಸಲಾಗುವುದ ಅಂತಾ ತಿಳಿಸಿದರು.

ಹಿಂದಿನ ಲೋಕ್ ಅದಾಲತ್ ಅಂಕಿ ಅಂಶಗಳು:

3,692 ಪ್ರಕರಣಗಳು ರಾಜಿ ಸಂಧಾನಕ್ಕೆ ಬಂದಿದ್ದು, ಇದರಲ್ಲಿ 2,862 ಪ್ರಕರಣಗಳು ಇತ್ಯರ್ಥಗೊಂಡಿವೆ. ವ್ಯಾಜ್ಯಪೂರ್ವ ಪ್ರಕರಣಗಳ ಸಂಖ್ಯೆ 1,101 ಆಗಿದ್ದು ಇದರಲ್ಲಿ 895 ಇತ್ಯರ್ಥಗೊಂಡಿವೆ.

ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಹೊರತು ಪಡಿಸಿಯೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಪರಿಗಣಿಸಿ ರಾಜಿ ಸಂಧಾನ ಮಾಡಿಸಲಾಗುವುದು. ರಾಜಿ, ಸಂಧಾನ ಬಳಿಕ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ತಿಯಾಗಿ ಮರುಪಾವತಿಯಾಗಲಿದೆ ಎಂದು ಹೇಳಿದರು.




Leave a Reply

Your email address will not be published. Required fields are marked *

error: Content is protected !!