ಯುರೋಪ್ ಬಳಿಕ ಹೆಚ್ಡಿಕೆ ಮಲೇಷಿಯಾ ಪ್ರವಾಸ

167

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇತ್ತೀಚೆಗಷ್ಟೇ ಕುಟುಂಬದ ಸದಸ್ಯರೊಂದಿಗೆ ಯುರೋಪ್ ಪ್ರವಾಸ ಮುಗಿಸಿಕೊಂಡು ಬಂದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸೋಮವಾರ ತಡರಾತ್ರಿ ಮತ್ತೆ ವಿದೇಶಿ ಪ್ರವಾಸ ಬೆಳೆಸಿದ್ದಾರೆ.

ಸೋಮವಾರ ರಾತ್ರಿ 12 ಗಂಟೆಗೆ ಮಲೇಷಿಯಾ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇವರೊಂದಿಗೆ ಮಾಜಿ ಶಾಸಕರಾದ ಎಂ.ಮಂಜುನಾಥ್, ಸಾ.ರಾ ಮಹೇಶ್, ಪರಿಷತ್ ಸದಸ್ಯ ಬೋಜೇಗೌಡ, ಮಾಜಿ ಸದಸ್ಯ ರಮೇಶಗೌಡ ಅವರೊಂದಿಗೆ ಹೆಚ್ಡಿಕೆ ಮತ್ತೆ ವಿದೇಶಕ್ಕೆ ಹಾರಿದ್ದಾರೆ.

ಹೆಚ್ಡಿಕೆ ಈ ಪ್ರವಾಸ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಯುರೋಪ್ ಪ್ರವಾಸ ಕುಟುಂಬದ ಜೊತೆಗೆ ಮಾಡಿದ್ದರು. ಈಗ ವಾಣಿಜ್ಯ ಸಂಸ್ಥೆಯೊಂದರ ಆಹ್ವಾನದ ಹಿನ್ನಲೆಯಲ್ಲಿ ಮತ್ತೆ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!