ರಾಹುಲ್ ಮದ್ವೆಯಾಗ್ತೀರಾ ಅಂದರೆ, ಒಂದು ಷರತ್ತು ಎಂದ ನಟಿ

307

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದ ನಟಿ ಶೆರ್ಲಿನ್ ಚೋಪ್ರಾ ತನ್ನ ಬೋಲ್ಡ್ ಸ್ಟೈಲ್ ಹಾಗೂ ಮಾತಿನಿಂದಲೂ ಸುದ್ದಿಯಲ್ಲಿ ಇರುತ್ತಾರೆ. ಮುಂಬೈನ ಬಾಂದ್ರಾಸ್ಟಾಂಡ್ ಹತ್ತಿರ ಎದುರಾದ ಪಾಪರಾಜಗಳು ಕೇಳಿದ ತಮಾಷೆಯ ಪ್ರಶ್ನೆಗೆ ನಟಿ ಶೆರ್ಲಿನ್ ಚೋಪ್ರಾ ಅಷ್ಟೇ ತಮಾಷೆಯಾಗಿ ಉತ್ತರಿಸಿದ್ದಾಳೆ.

ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ಮದುವೆಯಾಗುತ್ತೀರಾ ಎಂದು ಕೇಳಿದಾಗ, ಹೌದು ಆಕಾಗಬಾರದು. ಆದರೆ, ನನ್ನ ಉಪನಾಮ ಎಂದಿನಂತೆಯೇ ಇರಬೇಕು ಎನ್ನುವ ಷರತ್ತಿನೊಂದಿಗೆ ರಾಹುಲ್ ಗಾಂಧಿಯನ್ನು ಮದುವೆಯಾಗಲು ಒಪ್ಪಿಗೆ ಎಂದಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ನಟಿ ಶೆರ್ಲಿನಾ ಚೋಪ್ರಾ ವಿವಾದ ಹಾಗೂ ಬೋಲ್ಡ್ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ.

ಇತ್ತೀಚೆಗೆ ವಿಪಕ್ಷಗಳ ಸಭೆಯಲ್ಲಿಯೂ ಬಿಹಾರ ಮಾಜಿ ಸಿಎಂ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಹ ರಾಹುಲ್ ಮದ್ವೆ ಬಗ್ಗೆ ಪ್ರಸ್ತಾಪಿಸಿದ್ದರು. ಹರಿಯಾಣದ ಸೋನಿಪತ್ ಜಿಲ್ಲೆಯ ಮದಿನಾ ಗ್ರಾಮದಲ್ಲಿ ರಾಹುಲ್ ಗಾಂಧಿ ಅಲ್ಲಿನ ರೈತರೊಂದಿಗೆ ಭತ್ತದ ನಾಟಿ ಮಾಡಿದ್ದರು. ಅವರು ದೆಹಲಿಯನ್ನು ಇದುವರೆಗೂ ನೋಡಿಲ್ಲ ಎಂದಾಗ, ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಅವರ ಮನೆಗೆ ಬಂದ ರೈತ ಮಹಿಳೆಯರ ಎದುರು ಸಹ ರಾಹುಲ್ ಮದುವೆ ಪ್ರಸ್ತಾಪವಾದಾಗ, ತಾಯಿ ಸೋನಿಯಾ ಗಾಂಧಿ ರೈತ ಮಹಿಳೆಯರಿಗೆ ನೀವೇ ವಧು ಹುಡುಕಿ ಎಂದು ಹೇಳಿದ್ದು ಸಹ ಸಾಕಷ್ಟು ಸದ್ದು ಮಾಡಿತು.




Leave a Reply

Your email address will not be published. Required fields are marked *

error: Content is protected !!