ಪಡನೂರು ಗ್ರಾಮದಲ್ಲಿ ಸರಣಿ ಕಳ್ಳತನ

407

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಬೀಗ ಹಾಕಿದ್ದ ಎರಡು ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕತೋರಿಸಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಪಡನೂರು ಗ್ರಾಮದಲ್ಲಿ ನಡೆದಿದೆ. ಎರಡು ಮನೆಯಲ್ಲಿದ್ದ ನಗದು, ಚಿನ್ನಾಭರಣ, ಎರಡು ಮೊಬೈಲ್ ಕಳ್ಳತನವಾಗಿದೆ.

ಇನ್ನು ಮೂರನೇ ಮನೆಗೆ ಕಳ್ಳತನ ಮಾಡಲು ಯತ್ನಿಸಿದಾಗ ಸ್ಥಳೀಯರ ಕಣ್ಣಿಗೆ ಮೂವರು ಕಳ್ಳರು ಕಂಡಿದ್ದಾರೆ. ಇನ್ನೇನು ಅವರನ್ನ ಸ್ಥಳೀಯರ ಹಿಡಿಯಬೇಕು ಎನ್ನುವಷ್ಟರಲ್ಲಿ ಎಸ್ಕೇಪ್ ಆಗಿದ್ದಾರೆ. ಮನೆಯಲ್ಲಿ ಕಳ್ಳತನ ಮಾಡಿದ ಕೆಲ ವಸ್ತುಗಳನ್ನ ಬೀದಿ ಬದಿಯಲ್ಲಿ ಕಳ್ಳರು ಚೆಲ್ಲಾಡಿದ್ದಾರೆ. ಈ ಬಗ್ಗೆ ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!