ಇಂದು, ನಾಳೆ ಮುಖ್ಯಮಂತ್ರಿಗಳ ಜೊತೆ ಪಿಎಂ ಚರ್ಚೆ

344

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದು ಹಾಗೂ ನಾಳೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿರುವ ಕರೋನಾ ಕುರಿತು ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಂವಾದ ನಡೆಯಲಿದೆ.

ಎರಡು ದಿನಗಳ ಕಾಲ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಯುವ ವಿಡಿಯೋ ಸಂವಾದದಲ್ಲಿ, ಕರೋನಾವನ್ನ ಕಂಟ್ರೋಲ್ ಮಾಡುವುದು ಹೇಗೆ? ಆಗಸ್ಟ್ ನಲ್ಲಿ ಏರಿಕೆಯಾಗುವ ಇದರ ಪ್ರಮಾಣ ಕಡಿಮೆ ಮಾಡುವುದು ಹೇಗೆ? ಮತ್ತೆ ಲಾಕ್ ಡೌನ್ ಅಂದ್ರೆ ಜನರು ಪ್ರತಿಕ್ರಿಯೆ ಹೇಗೆ ಇರುತ್ತೆ? ಅನ್ನೋ ವಿಚಾರ ಸೇರಿದಂತೆ ಹಲವು ವಿಷಯಗಳ ಚರ್ಚೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!