‘ಮಹಾ’ ರಾಜಕೀಯ ಡ್ರಾಮಾ.. ‘ಕೈ’ ಕೊಟ್ಟ ಎನ್ ಸಿಪಿ!

410

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆದಿದೆ. ಹೀಗಾಗಿ ಶಿವ ಸೇನೆಗೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡುವ ವಿಚಾರದಲ್ಲಿ ಕೊನೆ ಕ್ಷಣದಲ್ಲಿ ಹಿಂದೇಟು ಹಾಕಿದ್ದಾರೆ. ಹೀಗಾಗಿ ಪಾಲಿಟಿಕ್ಸ್ ಪ್ರಹಸನ ನಡೆದಿದೆ.

ಶಿವಸೇನೆಗೆ ಬಾಹ್ಯ ಬೆಂಬಲ ನೀಡುವ ಕುರಿತು ಇನ್ನಷ್ಟು ಮಾತುಕತೆಯ ಅವಶ್ಯಕತೆಯಿದೆ ಅನ್ನೋ ಪತ್ರ ಮೀಡಿಗಳಿಗೆ ತಲುಪಿದೆ. ಇನ್ನು ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದ ಶಿವಸೇನೆ ನಿಯೋಗ ಸೋಮವಾರ ಸಂಜೆ ರಾಜಭವನಕ್ಕೆ ತೆರಳಿತ್ತು. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನ ಭೇಟಿ ಮಾಡಿದ ಶಾಸಕ ಆದಿತ್ಯ ಠಾಕ್ರೆ ನೇತೃತ್ವದ ನಿಯೋಗ, ಸರ್ಕಾರ ರಚನೆ ವಿಷಯ ಹೇಳಿದ್ದು, ಅಲ್ಲದೇ 48 ಗಂಟೆಗಳ ಕಾಲವಕಾಶ ಕೋರಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಇದಕ್ಕೆ ರಾಜ್ಯಪಾಲರು ಒಪ್ಪಿಲ್ಲವಂತೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತ್ನಾಡಿದ ಶಾಸಕ ಆದಿತ್ಯ ಠಾಕ್ರೆ, ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರ ಬಳಿ ಕೇಳಿಕೊಂಡಿದ್ದೇವೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ಬೆಂಬಲ ಪತ್ರ ಇದುವರೆಗೂ ಬಂದಿಲ್ಲ. ಇದಕ್ಕಾಗಿ ಹೆಚ್ಚಿನ ಅವಕಾಶ ಕೊಡಿ ಎಂದು ಕೇಳಿಕೊಂಡದ್ದೇವೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!