ಸಿಂದಗಿ, ‘ದೇ.ಹಿ’ಯಲ್ಲಿ ಕಳೆದ ರಾತ್ರಿ ಸುರಿದ ಮಳೆಯ ರಿಪೋರ್ಟ್

577

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕಳೆದ ರಾತ್ರಿ ಜಿಲ್ಲೆಯ ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆಯ ವರದಿ ಬಂದಿದ್ದು, ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ಅನ್ನೋದರ ವರದಿ ಇಲ್ಲಿದೆ ನೋಡಿ.

ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಬರೋಬ್ಬರಿ 160.2 ಮಿಲಿ ಮೀಟರ್ ಮಳೆಯಾಗಿದೆ. ಪಟ್ಟಣದಲ್ಲಿ 93.4 ಮಿಲಿ ಮೀಟರ್ ಮಳೆಯಾಗಿದೆ. ಸಿಂದಗಿಯಲ್ಲಿ 60 ಮಿಲಿ ಮೀಟರ್, ಕಡ್ಲೇವಾಡ ಪಿ.ಎಚ್ ನಲ್ಲಿ 55 ಮಿಲಿ ಮೀಟರ್, ಆಲಮೇಲದಲ್ಲಿ 47.5 ಮಿಲಿ ಮಿಟರ್, ರಾಮನಹಳ್ಳಿ 12 ಹಾಗೂ ಸಾಸಾಬಾಳದಲ್ಲಿ 7 ಮಿಲಿ ಮೀಟರ್ ಮಳೆಯಾಗಿದೆ.

ಮಳೆಗಾಲ ಪ್ರಾರಂಭವಾದ ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿರುವುದು ಇದೆ ಮೊದಲ ಬಾರಿಗೆ. ಇನ್ನು ಎಲ್ಲೆಲ್ಲಿ ಮನೆ ಹಾನಿ, ಬೆಳೆ ಹಾನಿ ಅನ್ನೋದು ತಿಳಿದು ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!