ಬಹುಮತವಿದ್ದರೂ ‘ಕೈ’ ತಪ್ಪಿದ ಸಿಂದಗಿ ಪುರಸಭೆ.. ‘ತೆನೆ ಮಹಿಳೆ’ ದಿಲ್ ಖುಷ್..

779

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಹುಮತವಿದ್ದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದ್ದು, ಪುರಸಭೆ ಚುಕ್ಕಾಣೆ ಜೆಡಿಎಸ್ ಪಾಲಾಗಿದೆ. ಅಧ್ಯಕ್ಷ ಸ್ಥಾನ ಜೆಡಿಎಸ್ ಅಭ್ಯರ್ಥಿ ಶಾಂತವೀರ ಮನಗೂಳಿ ಅವರ ಪಾಲಾಗಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಹಾಸೀಂಪೀರ ಆಳಂದ ಜೆಡಿಎಸ್ ಬೆಂಬಲದೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಪುರಸಭೆಯ 23 ಸದಸ್ಯರು ಹಾಗೂ 1 ಶಾಸಕರ ಮತ ಸೇರಿದಂತೆ 23+1ರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ 16 ಮತಗಳು ಬಿದ್ದಿವೆ. ಈ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಚುನಾವಣೆಗೆ ತೆರೆ ಬಿದ್ದಿದೆ. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿದ್ದರು.

ಆಯ್ಕೆಯಾದ ಸದಸ್ಯರು ತಮ್ಮ ಮನೆ ಕೆಲಸ ಬಿಟ್ಟು ಜನರ ಕೆಲಸ ಮಾಡಬೇಕು. ಮೊದ್ಲೇ ಸಿಂದಗಿ ಪುರಸಭೆ ಹೆಸರು ಸರಿಯಿಲ್ಲ. ನಾ ಎಂಎಲ್ಎ ಇದ್ದೇನೆ. ಅನುದಾನ ತರುತ್ತೇನೆ. ಇವರು ಕೆಲಸ ಮಾಡಿಕೊಂಡು ಹೋದರೆ, ಜನರಿಗೆ ಸವಲತ್ತುಗಳು ಸರಿಯಾಗಿ ಮುಟ್ಟುತ್ತವೆ.

ಎಂ.ಸಿ ಮನಗೂಳಿ, ಶಾಸಕರು

ಇಷ್ಟು ವರ್ಷಗಳ ಕಾಲ ಪುರಸಭೆ ಆಡಳಿತ ಮಾಡಿಕೊಂಡು ಬಂದಿದ್ದ ಕಾಂಗ್ರೆಸ್ ಗೆ ಇದು ತೀವ್ರ ಮುಖಭಂಗವನ್ನುಂಟು ಮಾಡಿದೆ. ಇನ್ನು ಪುರಸಭೆ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗುತ್ತಿದ್ದಂತೆ ಕಾರ್ಯಕರ್ತರ ಹರ್ಷ ಮುಗಿಲು ಮುಟ್ಟಿತು. ಪುರಸಭೆ ಆವರಣರದಲ್ಲಿ ಬಣ್ಣ ಎರಚಿಕೊಂಡು ಸಂತಸ ಹಂಚಿಕೊಂಡರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯ್ತು.

ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಇಲ್ಲಿ ನಾನೊಬ್ಬನೇ ಅಧ್ಯಕ್ಷನಲ್ಲ. ಎಲ್ಲರೂ ಅಧ್ಯಕ್ಷರೆ. ನಾವೆಲ್ಲ ಕೂಡಿಕೊಂಡು ಪಟ್ಟಣವನ್ನ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತೇವೆ.

ಡಾ.ಶಾಂತವೀರ ಮನಗೂಳಿ, ಪುರಸಭೆ ನೂತನ ಅಧ್ಯಕ್ಷರು



Leave a Reply

Your email address will not be published. Required fields are marked *

error: Content is protected !!