ಒಟ್ಟಾಗಿ ಸಿನಿಮಾ ಮಾಡ್ತಾರಂತೆ ಪುನೀತ್ ರಾಜಕುಮಾರ್, ಯಶ್ !

1139

ಇತ್ತೀಚೆಗಷ್ಟೇ ತೆರೆಕಂಡಿರುವ ಪವನ್ ಒಡೆಯರ ನಿರ್ದೇಶನದ ‘ನಟಸಾರ್ವಭೌಮ’ ರಾಜ್ಯದಾದ್ಯಂತ ಧೂಳೆಬ್ಬೆಸುತ್ತಿದೆ. ಸಿನಿಮಾ ಸಕ್ಸಸ್ ಖುಷಿಯನ್ನು ಫೇಸಬುಕ್ ಲೈವನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ತಮ್ಮ ಮುಂದಿನ ಸಿನಿಮಾಗಳ ಮಾತನಾಡಿದ್ದಾರೆ.

ಲೈವನಲ್ಲಿ ಕೆಲವು ಅಭಿಮಾನಿಗಳು, ಮಲ್ಟಿಸ್ಟಾರ್ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಪುನೀತ್ ರಾಜ್‍ಕುಮಾರ್,  ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ  ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಒಟ್ಟಿಗೆ ಸಿನಿಮಾ ಮಾಡುವ ಸೂಚನೆ ಸಿಕ್ಕಂತಾಗಿದೆ.

ಇತ್ತೀಚೆಗಷ್ಟೇ `ಜುಗಾರಿ ಕ್ರಾಸ್’ ಮುಹೂರ್ತಕ್ಕೆ ಶುಭ ಹಾರೈಸಲು ಬಂದಿದ್ದ ಪುನೀತ್ ರಾಜ್‍ಕುಮಾರ್ ಹಾಗೂ ಯಶ್ ಒಟ್ಟಿಗೆ ಮಾಧ್ಯಮದವರ ಜೊತೆ ಮಾತನಾಡಿ, ಒಟ್ಟಿಗೆ ಸಿನಿಮಾ ಮಾಡುವ ಸೂಚನೆ ನೀಡಿದ್ದರು. ಕನ್ನಡದ ಈ ಇಬ್ಬರು ನಟರು, ಆದಷ್ಟು ಬೇಗ ಒಟ್ಟಿಗೆ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!