ಇಂದು 51 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ

558

ಸಿಂದಗಿ: ಪಟ್ಟಣದ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಇಂದು 23 ವಾರ್ಡ್ ಗಳಿಗೆ 51 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ, ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ, ಪರಿಶಿಷ್ಟ ಜಾತಿ ಮಹಿಳೆ ಹೀಗೆ ವಿವಿಧ ಮೀಸಲಾತಿ ಕೋಟಾದಡಿಯಲ್ಲಿರುವ ವಾರ್ಡ್ ಗಳಲ್ಲಿನ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

1ನೇ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಿಭಾ ಶಿವಕುಮಾರ, ಬಿಜೆಪಿಯಿಂದ ಪಾರ್ವತಿ ಸುದರ್ಶನ, ಬಿಜೆಪಿಯಿಂದ ಕಸ್ತೂರಿಬಾಯಿ ಚಂದ್ರಶೇಖರ ಉಮೇದುವಾರಿಕೆ ಸಲ್ಲಿಸಿದ್ದಾರೆ. ವಾರ್ಡ್ ನಂಬರ್ 2 ಪರಿಶಿಷ್ಟ ಮಹಿಳಾ ಮೀಸಲಾತಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸಂಗೀತಾ ಮಹಾಂತೇಶ ನಡುವಿನಕೇರಿ, ಬಿಜೆಪಿಯಿಂದ ಹಣಮವ್ವ ನರಸಪ್ಪ ಭಜಂತ್ರಿ, ಕಾಂಗ್ರೆಸ್ ನಿಂದ ಜ್ಯೋತಿ ರಾಜು ಬಡಿಗೇರ, ಜೆಡಿಎಸ್ ನಿಂದ ಉಮಾದೇವಿ ಶರಣಪ್ಪ ಸುಲ್ಫಿ ನಾಮಪತ್ರ ಸಲ್ಲಿಸಿದ್ದಾರೆ.

ವಾರ್ಡ್ ನಂಬರ್ 3ರ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಶಾಂತ ಗಿರಿಮಲಯ್ಯ ನಂದಿಕೋಲ, ಕಾಂಗ್ರೆಸ್ ನಿಂದ ಶ್ರೀಶೈಲ ಮಲ್ಲಪ್ಪ ಬೀರಗೊಂಡ ನಾಮಪತ್ರ ಸಲ್ಲಿಸಿದ್ದಾರೆ. 4ನೇ ವಾರ್ಡ್ ನಿಂದ ಇಂದು ಯಾರೂ ನಾಮಪತ್ರ ಸಲ್ಲಿಸಿಲ್ಲ. 5ನೇ ವಾರ್ಡಿನ್ ಹಿಂದುಳಿದ ಎ ಮೀಸಲಾತಿಯಿಂದ ಜೆಡಿಎಸ್ ನಿಂದ ಬಸವರಾಜ ಚಂದ್ರಾಮಪ್ಪ ಯರನಾಳ, ಬಿಜೆಪಿಯಿಂದ ಪರಶುರಾಮ ವಿಠ್ಠಲ ಗುಳ್ಳೂರ ಹಾಗೂ 6ನೇ ವಾರ್ಡ್ ಸಾಮಾನ್ಯ ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಂದ ಹಣಮಂತಪ್ಪ ಯಮನಪ್ಪ ಸುಣಗಾರ ಉಮೇದುವಾರಿಕೆ ಸಲ್ಲಿಸಿದ್ದಾರೆ.

7ನೇ ವಾರ್ಡಿನ ಹಿಂದುಳಿದ ವರ್ಗ ಎರಲ್ಲಿ ಬಿಜೆಪಿಯಿಂದ ರಾಮಚಂದ್ರ ಪರಪ್ಪ ಪತ್ತಾರ ಸ್ಪರ್ಧೆಗೆ ಇಳಿದಿದ್ದಾರೆ. 8ನೇ ವಾರ್ಡಿನ್ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿಯಲ್ಲಿ, ನಾಜುಕಬಿ ಮರ್ತೂರ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಖೈರನುಬಿ ಮಹ್ಮದಹನೀಫ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಇವರೇ ನಾಮಪತ್ರ ಸಲ್ಲಿಸಿದ್ದಾರೆ. 9ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಹಿಬೂಬ ಅಮಿನುದ್ದೀನ ವಾಲೀಕಾರ ಹಾಗೂ ಬಿಜೆಪಿಯಿಂದ ಮಹಿಬೂಬಅಲಿ ಲಾಲಸಾಹೇಬ ದೇವರಮನಿ ಕಣಕ್ಕೆ ಇಳಿದಿದ್ದಾರೆ.

10ನೇ ವಾರ್ಡಿನ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಪಾರ್ವತಿ ಗುರಪ್ಪ ದುರ್ಗಿ ಹಾಗೂ ಮಲ್ಲಮ್ಮ ಗೌರಿಶಂಕರ ಮೊಕಳೆ ಎಂಬುವರಿಬ್ಬರು ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದ್ದಾರೆ. 11ನೇ ವಾರ್ಡಿನಿಂದ ಬಿಜೆಪಿಯಿಂದ ವಿಜಯಲಕ್ಷ್ಮಿ ಗಿರೀಶ ನಾಗೂರ ಮತ್ತು ಬೌರಮ್ಮ ಚಂದ್ರಶೇಖರ ನಾಗೂರ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಹೀಗೆ 1ನೇ ವಾರ್ಡ್ ನಿಂದ 11ನೇ ವಾರ್ಡ್ ತನಕ 22 ಜನ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇನ್ನು 12ನೇ ವಾರ್ಡ್ ನಿಂದ 23ನೇ ವಾರ್ಡ್ ನಲ್ಲಿ 29 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!