ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

458

ಸಿಂದಗಿ: ಕುಮಾರ ಇನ್ಫೋಟೆಕ್ ಹಾಗೂ ಕೌಶಲ್ಯಾಭಿವೃದ್ಧಿ ಹಾಗೂ ಕಂಪ್ಯೂಟರ್ ತರಬೇತಿ ಸಂಸ್ಥೆ ಸಹಯೋಗದಲ್ಲಿ ತರಬೇತಿ ಕಾರ್ಯಕ್ರಮ ಚಾಲನಾ ಸಮಾರಂಭ ಆಯೋಜಿಸಲಾಗಿತ್ತು. ಪಟ್ಟಣದ ವಿವೇಕಾನಂದ ಸರ್ಕಲ್ ಬಳಿಯಿರುವ ಸಂಸ್ಥೆಯಲ್ಲಿ, 2018-19ನೇ ಸಾಲಿನ ಮಹಿಳಾ ತರಬೇತಿ ಯೋಜನೆಯಡಿ ಫೀಲ್ಡ್ ಟೆಕ್ನಿಶಿಯನ್ ಕಂಪ್ಯೂಟರಿಂಗ್ ಹಾಗೂ ಪೆರಿಫರಲ್ಸ್ ಮತ್ತು ಡಾಕ್ಯೂಮೆಂಟೇಷನ್ ಅಸಿಸ್ಟಂಟ್ ಕೋರ್ಸ್ ಗಳಿಗೆ ಆಯ್ಕೆಯಾದ ನಿರುದ್ಯೋಗ ಯುವತಿರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಶಿಕಲಾ ಟೆಂಗಳೆ ಉದ್ಘಾಟಿಸಿದ್ರು.

ಈ ವೇಳೆ ಮಾತ್ನಾಡಿದ ಅವರು, ಕುಮಾರ ಇನ್ಫೋಟೆಕ್ ಸಂಸ್ಥೆ ಬಡ ನಿರುದ್ಯೋಗ ಯುವತಿಯರಿಗೆ ಸರ್ಕಾರದ ಯೋಜನೆಗಳನ್ನ ತಲುಪಿಸುವ ಕಾರ್ಯ ಮಾಡ್ತಿರುವುದು ಶ್ಲಾಘನೀಯ ಅಂತಾ ಹೇಳಿದ್ರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಕುಮಾರ ಎಂ ಮಠ ಪ್ರಾಸ್ತಾವಿಕ ನುಡಿಗಳನ್ನಾಡಿದ್ರು. ಮುಖ್ಯಅತಿಥಿಗಳಾಗಿ ಕೃಷ್ಣಮೂರ್ತಿ ಹಾಗೂ ಭಾರತಿ ಪಾಟೀಲ ಭಾಗವಹಿಸಿದ್ರು. ಅರುಣಕುಮಾರ ಹೆರೂರ ನಿರೂಪಿಸಿದ್ರು. ಮಹಾಂತೇಶ ನಾಗೋಜಿ ಪ್ರಾರ್ಥನಾ ಗೀತೆ ಹಾಡಿದ್ರು.




Leave a Reply

Your email address will not be published. Required fields are marked *

error: Content is protected !!