3 ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್

423

ನವದೆಹಲಿ: ಬ್ಯಾಂಕ್ ಸಂಘಟನೆಗಳ ಒಕ್ಕೂಟ(UFBU) ವೇದಿಕೆ ಜನವರಿ 31 ಹಾಗೂ ಫೆಬ್ರವರಿ 1ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಫೆಬ್ರವರಿ 2 ಭಾನುವಾರ ಇರುವುದ್ರಿಂದ ಒಟ್ಟು ಮೂರು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.

ವೇತನ ಪರಿಷ್ಕರಣೆ ಬಗ್ಗೆ ಬ್ಯಾಂಕ್ ಗಳ ಸಂಘದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಕಾರಣಕ್ಕೆ ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಒಕ್ಕೂಟದಲ್ಲಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಒಕ್ಕೂಟ, ಭಾರತೀಯ ಬ್ಯಾಂಕ್ ನೌಕರರ ಫೆಡರೇಷನ್, ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಫೆಡರೇಷನ್, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ ಹೀಗೆ ಹಲವು ಸಂಘಟನೆಗಳು ಸೇರಿಕೊಂಡು ಬ್ಯಾಂಕ್ ಸಂಘಟನೆಗಳ ಒಕ್ಕೂಟ ಮಾಡಿಕೊಳ್ಳಲಾಗಿದೆ.

ಫೆಬ್ರವರಿ 1ಕ್ಕೆ ಕೇಂದ್ರದ ಬಜೆಟ್ ಮಂಡನೆಯಾಗಲಿದೆ. ಅಂದು ಸಹ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮೂಲಕ ತಮ್ಮ ಬೇಡಿಕೆ ಈಡೇರಿಕೆಗೆ ಬ್ಯಾಂಕ್ ನೌಕರರು ಒತ್ತಾಯಿಸಿದ್ದಾರೆ. ಇನ್ನೊಂದ್ಕಡೆ ಈ ಬ್ಯಾಂಕ್ ನೌಕರರು ಬೇಕೆಂದಲೇ ಶನಿವಾರದ ಹಿಂದೆ ಮುಂದಿನ ದಿನಗಳನ್ನ ನೋಡಿಕೊಂಡು ಮುಷ್ಕರ ನಡೆಸುವ ಮೂಲಕ ಸಾಲು ಸಾಲು ಬಂದ್ ಗಳನ್ನ ಮಾಡಿ ಸಾರ್ವಜನಿಕರಿಗೆ ತೊಂದರೆಕೊಡ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!