ಪ್ರಿನ್ಸ್ ದಾಖಲೆ ಧೂಳಿಪಟ ಮಾಡಿದ ಸ್ಟೈಲಿಶ್ ಸ್ಟಾರ್

570

ಟಾಲಿವುಡ್ ಪ್ರಿನ್ಸ್ ಖ್ಯಾತಿಯ ನಟ ಮಹೇಶಬಾಬು ರೆಕಾರ್ಡ್ ನ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ ಬ್ರೇಕ್ ಮಾಡಿದ್ದಾರೆ. ಅದು ಅಮೆರಿಕಾದಲ್ಲಿನ ದಾಖಲೆಯನ್ನ ಅಲ್ಲು ಅರ್ಜುನ ಸರಿಗಟ್ಟಿದ್ದಾರೆ. ಯುಎಸ್ಎ ಬಾಕ್ಸ್ ಆಫೀಸ್ ನ ಕಲೆಕ್ಷನ್ ನಲ್ಲಿ ಮಹೇಶಬಾಬು ಅಭಿನಯದ ಭರತ್ ಅನೆ ನೇನು ಅನ್ನೋ ಚಿತ್ರ ನಾಲ್ಕನೇ ಸ್ಥಾನದಲ್ಲಿತ್ತು. ಅದನ್ನ ಅಲ್ಲು ಅರ್ಜುನ ನಟನೆಯ ಅಲಾ ವೈಕುಂಠಪುರಮಲೋ ಚಿತ್ರ ಹಿಂದಿಕ್ಕಿದೆ.

ತ್ರಿವಿಕ್ರಮ ಶ್ರೀನಿವಾಸ ನಿರ್ದಶನದ ಅಲಾ ವೈಕುಂಠಪುರಮಲೋ ಮೂವಿ 15 ದಿನಗಳಲ್ಲಿ ಯುಎಸ್ಎ ಬಾಕ್ಸ್ ಆಫೀಸ್ ನಲ್ಲಿ 3.4 ಮಿಲಿಯನ್ ಡಾಲರ್ ಗಳಿಕೆ ಮಾಡಿದೆ. ಈ ಮೂಲಕ ಅಮೆರಿಕಾದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಇದು ನಾಲ್ಕನೇ ಸ್ಥಾನಕ್ಕೆ ಬಂದಿದ್ದು, ರಾಮಚರಣ ತೇಜಾ ಅಭಿನಯದ ರಂಗಸ್ಥಳಂ ಮೂವಿ 3.5 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿ 3ನೇ ಸ್ಥಾನದಲ್ಲಿದ್ದು ಇದನ್ನ ಬ್ರೇಕ್ ಮಾಡುವ ಲಕ್ಷಣಗಳಿವೆ.

ಮೊದಲ ಸ್ಥಾನದಲ್ಲಿ ಬಾಹುಬಲಿ-2, 2ನೇ ಸ್ಥಾನದಲ್ಲಿ ಬಾಹುಬಲಿ 1 ಚಿತ್ರಗಳಿವೆ. ರಂಗಸ್ಥಳಂ ದಾಖಲೆ ಉಡೀಸ್ ಮಾಡಿದ್ರೆ ಪ್ರಭಾಸ ನಂತ್ರದ ಸ್ಥಾನದಲ್ಲಿ ಅಲ್ಲು ಅರ್ಜುನ ದಾರ್ಬರ್ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!