ನಟ ಮಹೇಶ್ ಬಾಬು ತಾಯಿ ನಿಧನ

181

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಟಾಲಿವುಡ್ ನಟ ಮಹೇಶ್ ಬಾಬು ಅವರ ತಾಯಿ ಇಂದಿರಾದೇವಿ ಬುಧವಾರ ನಿಧನರಾಗಿದ್ದಾರೆ. ಹೈದ್ರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೃಷ್ಣ ಹಾಗೂ ಇಂದಿರಾದೇವಿಗೆ ರಮೇಶ್ ಬಾಬು, ಮಹೇಶ್ ಬಾಬು ಇಬ್ಬರು ಗಂಡು ಮಕ್ಕಳು, ಪದ್ಮಾವತಿ, ಮಂಜುಳಾ ಹಾಗೂ ಪ್ರಿಯದರ್ಶನಿ ಅನ್ನೋ ಮೂವರು ಹೆಣ್ಣು ಮಕ್ಕಳು. ಇನ್ನು ಕೆಲ ತಿಂಗಳುಗಳ ಹಿಂದೆ ಸುರೇಶ್ ಬಾಬು ಸಹ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಇದೀಗ ತಾಯಿಯನ್ನು ಕಳೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!