ನಾಮಪತ್ರ ಸಲ್ಲಿಕೆ ಚುರುಕು.. ಪ್ರಜಾಸ್ತ್ರ ನ್ಯೂಸ್ ಇಂಪ್ಯಾಕ್ಟ್

472

ಸಿಂದಗಿ: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ನಿನ್ನೆ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ರು. ಇಂದು ಮತ್ತೆ ಕೆಲವರು ನಾಮಪತ್ರವನ್ನ ಸಲ್ಲಿಸಿದ್ದಾರೆ. ಇನ್ನು ಕೆಲವರು ಸಲ್ಲಿಕೆಗೆ ಮುಂದಾಗಿದ್ದಾರೆ. 23 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು, ಜನವರಿ 21 ರಿಂದ ನಾಮಪತ್ರ ಸಲ್ಲಿಕೆ ಕೆಲಸ ಶುರುವಾಗಿದೆ. ಜನವರಿ 28 ಕೊನೆಯ ದಿನವಾಗಿದೆ.

11ನೇ ವಾರ್ಡ್ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಇಂದು ತಹಶೀಲ್ದಾರ್ ಕಚೇರಿಯ ಎರಡೂ ಗೇಟ್ ಗಳನ್ನ ಬಂದ್ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಹಾಗೂ ಅವರೊಂದಿಗೆ ಐದು ಜನರು ಹೊರತು ಪಡಿಸಿ ಯಾರನ್ನ ಒಳಗೆ ಬಿಡ್ತಿಲ್ಲ. ಕಚೇರಿ ಸುತ್ತಮುತ್ತ ಬಿಗಿ ಬಂದೋಬಸ್ತಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಹಾಗೂ ತಾಲೂಕು ಚುನಾವಣಾಧಿಕಾರಿ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಪ್ರಜಾಸ್ತ್ರ ವರದಿ ಇಂಪ್ಯಾಕ್ಟ್ ಆಗಿದೆ. ‘ಉಮೇದುವಾರಿಕೆ ವೇಳೆ ನೀತಿ ಸಹಿಂತೆ ಉಲ್ಲಂಘನೆ’ ಅನ್ನೋ ಅಡಿಬರಹದಲ್ಲಿ ನಿನ್ನೆ ಸುದ್ದಿ ಮಾಡಲಾಗಿತ್ತು. ಇದ್ರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂದು ಸೂಕ್ತ ಬಂದೋಬಸ್ತಿಯನ್ನ ಒದಗಿಸಿದ್ದು ಸುಖಾಸುಮ್ಮನೆ ಯಾರನ್ನೂ ಒಳಗೆ ಬಿಡ್ತಿಲ್ಲ.

ಪ್ರಜಾಸ್ತ್ರ ವರದಿ



Leave a Reply

Your email address will not be published. Required fields are marked *

error: Content is protected !!