ಡೆಡ್ಲಿ ಕೊರೋನಾ ರಾಜ್ಯಕ್ಕೂ ಎಂಟ್ರಿ

356

ಬೆಂಗಳೂರು: ಚೀನಾದಲ್ಲಿ ಈಗಾಗ್ಲೇ ಹತ್ತಾರು ಜೀವಗಳನ್ನ ಬಲಿ ಪಡೆದಿರುವ ಹಾಗೂ ಸಾವಿರಾರು ಜನರಲ್ಲಿ ಕಾಣಿಸಿಕೊಂಡಿರುವ ಡೆಡ್ಲಿ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಅಲ್ದೇ, ಸಿಲಿಕಾನ್ ಸಿಟಿಯಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಚೀನಾದಿಂದ ಭಾರತಕ್ಕೆ ಬಂದಿರುವ 80 ಮಂದಿ ಪೈಕಿ 11 ಮಂದಿಯಲ್ಲಿ ಕೊರೋನಾ ವೈರಸ್ ಕಂಡು ಬಂದಿದೆ. ಇದರ ಎಫೆಕ್ಟ್ ಕೇರಳ, ಬೆಂಗಳೂರು, ಮುಂಬೈ ಹಾಗೂ ಹೈದ್ರಾಬಾದ್ ನಲ್ಲಾಗಿದೆ. ಹೀಗಾಗಿ ಕೇರಳದ ವಿವಿಧ ಆಸ್ಪತ್ರೆಗಳಲ್ಲಿ 7 ಮಂದಿ, ಮುಂಬೈನಲ್ಲಿ 2 ಹಾಗೂ ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ ಒಬ್ಬರಲ್ಲಿ ಕೊರೋನಾ ವೈರಸ್ ಕಂಡು ಬಂದಿದೆ. ಹೀಗಾಗಿ ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗ್ತಿದೆ.

ಚೀನಾದಿಂದ ಕೇರಳಕ್ಕೆ 80 ಜನ ಮರಳಿದ್ದಾರೆ. ಇವರ ಆರೋಗ್ಯದ ಮೇಲೆ ಗಮನ ಹರಿಸಲಾಗಿದೆ. ಇದರಲ್ಲಿ 7 ಜನರಲ್ಲಿ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿದ್ದು ಉಳಿದ 73 ಜನರಲ್ಲಿ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಆದ್ರೂ ಅವರೆಲ್ಲರ ಮೇಲೆ ನಿಗಾವಹಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!