ಸಿಂದಗಿ ಮಾರುಕಟ್ಟೆ ಜಾಗ ವಿವಾದ: ವ್ಯಾಪಾರಸ್ಥರು ಹೇಳಿದ್ದೇನು?

372

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಸರ್ವೇ ನಂಬರ್ 954/ಅ1ರ 1 ಎಕರೆ 26 ಗುಂಟೆ ಜಾಗದಲ್ಲಿ 15 ಗುಂಟೆ ಜಾಗವನ್ನ ತರಕಾರಿ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಸೂಚಿಸಿದೆ. ಇದು ಬಾಗವಾನ ಸಮುದಾಯಕ್ಕಾಗಲಿ, ಎಪಿಜಿ ಅಬ್ದುಲ್ ಕಲಾಂ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘಕ್ಕಾಗಲಿ, ಯಾವುದೇ ವ್ಯಕ್ತಿಗಾಗಲಿ ಸಂಬಂಧಿಸಿಲ್ಲ. ಎಂದು ರಾಜು ಖೇಡ ಹೇಳಿದ್ರು.

ಈ ಜಾಗ ತಾಲೂಕು ಪಂಚಾಯ್ತಿ ವ್ಯಾಪ್ತಿಗೆ ಬರ್ತಿದ್ದು, ಶಾಸಕರು ಒಂದು ಸಮುದಾಯವನ್ನ ಓಲೈಕೆ ಮಾಡಲು ಭೂ ಕಬಳಿಕೆ ಮಾಡ್ತಿದ್ದಾರೆ ಅನ್ನೋ ಆರೋಪವನ್ನ ತಾಲೂಕು ಪಂಚಾಯ್ತಿ ಸದಸ್ಯ ಕಿರಣರಾಜ ಶುಕ್ರವಾರ 16ನೇ ಸಾಮಾನ್ಯ ಸಭೆಯಲ್ಲಿ ಮಾಡಿದ್ರು. ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಾಗವಾನ ಸಮಾಜದ ಮುಖಂಡರು ಮಾತ್ನಾಡಿ, ಇದು ಮುಪ್ಪತ ಸರ್ಕಾರಿ ಜಾಗ. ಅಂದ್ರೆ ಸರ್ಕಾರದ ಜಾಗ. ತರಕಾರಿ ಮಾರುಕಟ್ಟೆಗೆ ನೀಡಿದ್ದಾರೆ. ಇಲ್ಲಿ ಯಾರು ಬೇಕಾದ್ರೂ ಬಂದು ತರಕಾರಿ, ಹಣ್ಣು ವ್ಯಾಪಾರ ಮಾಡಬಹುದು. ಯಾವುದೇ ವ್ಯಕ್ತಿಗೆ, ಸಂಘಕ್ಕೆ ಸೇರಿಲ್ಲ. ನಾಳೆ ಇಲ್ಲಿ ಮಾರುಕಟ್ಟೆಯಾದ್ರೆ, ಸರ್ಕಾರದ ಸವಾಲಿನಲ್ಲಿ ಭಾಗವಹಿಸಿ ಯಾರು ಬೇಕಾದ್ರೂ ತರಕಾರಿ, ಹಣ್ಣು ಅಂಗಡಿ ಪಡೆಯಬಹುದು ಎಂದು ಹೇಳಿದ್ರು.

ಇದೆ ವೇಳೆ ಪುರಸಭೆಯಲ್ಲಿ 2018ರಲ್ಲಿ ಆದ ಠರಾವು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿ ಬರೆದ ಪತ್ರ, ಜಿಲ್ಲಾಧಿಕಾರಿ ಪುರಸಭೆ ಮುಖ್ಯಾಧಿಕಾರಿಗೆ ಬರೆದ ಪತ್ರ, ಮಾರುಕಟ್ಟೆಗೆ ಮಂಜೂರಾದ ಜಾಗಕ್ಕೆ ಅಂದಿನ ಮಾರುಕಟ್ಟೆಯ ಬೆಲೆಯ ಶೇಕಡ 50ರಷ್ಟು ದರವನ್ನ ಸರ್ಕಾರಕ್ಕೆ ಕಟ್ಟಿ, ಮಾರುಕಟ್ಟೆ ನಿರ್ಮಿಸುವ ಸಂಬಂಧ ನೀಡಿರುವ ದಾಖಲೆಗಳನ್ನ ಪ್ರದರ್ಶನ ಮಾಡಿದ್ರು. ಈ ಮೂಲಕ ಸರ್ಕಾರದ ಜಾಗವನ್ನ ಸರ್ಕಾರವೇ ಖರೀದಿ ಮಾಡಿ ಮಾರುಕಟ್ಟೆ ನಿರ್ಮಿಸಲು ನೀಡಿದೆ ಎಂದು ಹೇಳಿದ್ರು.

ಈ ವೇಳೆ ಡಾ. ಎಪಿಜೆ ಅಬ್ದುಲ್ ಕಲಾಂ ಸಂಘದ ಅಧ್ಯಕ್ಷ ಸೈಪನ್ ನಾಟಿಕರ್, ಇಕ್ಬಾಲ ತಲಕೇರಿ, ಗುಲಾಬ ಮರ್ತೂರ, ವಾಹಿದ ಬಾಗವಾನ, ರಾಜು ಖೇಡ, ಅಬೂಬಕರ ಡೋಣಿ, ಶಬ್ಬೀರ ಬಾಗವಾನ, ಶಬ್ಬೀರ ಹಳ್ಳೂರು, ಮಹಿಬೂಬ ಮರ್ತೂರ, ಬಂದೇನವಾಜ ಶಾಪುರ, ಮೊಹಮ್ಮದ ಅಳ್ಳೊಳ್ಳಿ, ಬಾಬು ಅಳ್ಳೊಳ್ಳಿ ಸೇರಿ ಅನೇಕರಿದ್ರು.




Leave a Reply

Your email address will not be published. Required fields are marked *

error: Content is protected !!