ಸೈನ್ಯಕ್ಕೆ ಕೂಲಿ ಕುದುರೆಗಳ ಸೇವೆ ಹೇಗಿದೆ?

380

ಪೊಲೀಸ್ ಇಲಾಖೆಯ ನಿವೃತ್ತ ಆಡಳಿತ ಅಧಿಕಾರಿಯಾಗಿರುವ ಎಸ್.ಎಲ್ ಶ್ರೀಧರಮೂರ್ತಿ ಅವರ ಲೇಖನ ಇಲ್ಲಿದೆ..

ಲಡಾಖ್ ಸುತ್ತ ಮುತ್ತ ಪರ್ವತಮಯವಾಗಿದ್ದು, ರೋಹ್ ತಂಗ್-ಜೋಜಿ ಕಣಿವೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾದು ಹೋಗಲು ಇರುವ ದುರ್ಗಮ ಹಾದಿಯಾಗಿದೆ. ಇವೆಲ್ಲವೂ ಹಿಮದಿಂದ ಕೂಡಿದ್ದು, ಚಳಿಗಾಲದಲ್ಲಿ ಮೈಕೊರೆಯುವ ವಿಪರೀತ ಚಳಿ ಇರುತ್ತದೆ. ಮತ್ತೊಂದು ಗಾಬರಿ ಹುಟ್ಟಿಸುವ ಸಂಗತಿ ಎಂದರೆ ಈ ಎತ್ತರ ಪ್ರದೇಶಗಳಲ್ಲಿ ಆಕ್ಸಿಜನ್ ಕೊರತೆ ಇದ್ದು, ನಮ್ಮ ನಗರ ಪಟ್ಟಣಗಳಲ್ಲಿ ಸಿಗುವುದಕ್ಕಿಂತ ಶೇಕಡ 50% ರಷ್ಟು ಕಡಿಮೆ ಆಕ್ಸಿಜನ್ ಇರುವುದರಿಂದ ಉಸಿರಾಟ ತೊಂದರೆಯಾಗುತ್ತದೆ. ನೀರು ಸಹ ಹಿಮವಾಗುತ್ತದೆ. ಇಂತಹ ವಾತಾವರಣದಲ್ಲಿ ನಮ್ಮ ಸೈನಿಕರು ತಮ್ಮ ಪ್ರಾಣದ ಭಯಬಿಟ್ಟು, ಚೈನಾ ಸೈನಿಕರ ದುರಾಕ್ರಮಣಗಳ ವಿರುದ್ಧ ಹೋರಾಡಬೇಕಾಗಿದೆ.

ಆಹಾರ, ಇಂಧನ, ಶಸ್ತ್ರಾಸ್ತ್ರಗಳು ಸೈನಿಕರಿಗೆ ಮುಖ್ಯವಾಗಿ ಬೇಕಾಗಿರುವ ವಸ್ತುಗಳನ್ನು ಸಾಗಿಸಲು ಲಡಾಖ್ ಕೇಂದ್ರವಾಗಿ ಜೋಜಿಲ್ ಕಣಿವೆಯಿಂದ ಹೋದರೆ 10 ದಿನಗಳಾಗುತ್ತವೆ. ರೋಹಿತಂಗ್ ಮಾರ್ಗವಾಗಿ ಹೋದರೆ 14 ದಿನಗಳಾಗುತ್ತವೆ. ಈ ಎಲ್ಲ ವಸ್ತುಗಳನ್ನು ಟ್ರಕ್ ಮೂಲಕ ಸಾಗಿಸುತ್ತಾರೆ. ಟ್ರಕ್ ಡ್ರೈವರ್ ರಾತ್ರಿ ಮಲಗಿ ಹಗಲು ಈ ದುರ್ಗಮ ಹಾದಿಯ ಮೂಲಕ ತುಂಬಾ ಎಚ್ಚರದಿಂದ ಸಾಗಿಸುತ್ತಾನೆ. ಕಿರಿದಾದ ರಸ್ತೆಯನ್ನು ನೋಡಿಕೊಳ್ಳಬೇಕಲ್ಲದೇ, ಶತೃಗಳ ಕಣ್ಣಿಗೆ ಬಿಳದಂತೆ ಬಹಳ ಎಚ್ಚರವಹಿಸಬೇಕಾಗುತ್ತದೆ. ನಮ್ಮ ಸೈನ್ಯ ಆರೋಗ್ಯವಾಗಿ, ಸುರಕ್ಷಿತವಾಗಿ, ಭಾರತ ಗಡಿಗಳನ್ನು ಕಾಪಾಡಬೇಕೆಂದರೆ ಈ ಟ್ರಕ್ ಡ್ರೈವರ್ಗಳ ಪಾತ್ರವು ಮಹತ್ತರವಾಗಿರುತ್ತದೆ. ಇವರು ಕರ್ತವ್ಯ ಮುಗಿಸಿದ ನಂತರ ಎರಡು ದಿನ ವಿಶ್ರಾಂತಿ ಪಡೆದು ಪ್ರಯಾಣವನ್ನು ಅವರ ಕೇಂದ್ರ ಸ್ಥಾನದಿಂದ ಪುನಃ ಆರಂಭಿಸುತ್ತಾರೆ.

ಈ ರೀತಿ ಸೈನಿಕರಿಗೆ ಜೀವನ ಹಂಗು ತೊರೆದು ಸರಕು, ಸಾಮಗ್ರಿ, ಸಾಗಿಸುವ ಈ ಡ್ರೈವರ್ ಗಳು ಚಳಿಗಾಲವಿರುವ ಆರು ತಿಂಗಳುಗಳು ಸತತವಾಗಿ ಹತ್ತು ಸಾವಿರ ಕಿ.ಮೀ. ಪ್ರಯಾಣಮಾಡಿ ಸರಹದ್ದು ಸೇರಿಸುವುದು ಒಂದು ವರ್ಗವಾದರೆ, ನೇರವಾಗಿ ಸೈನಿಕರ ಸ್ಥಾವರಗಳನ್ನು ಸೇರಿಸುವುದು ಮತ್ತೊಂದು ಮುಖ್ಯವಾದ ಗುರಿಯಾಗಿರುತ್ತದೆ. ಇದಕ್ಕಾಗಿ ಮತ್ತೊಂದು ವರ್ಗವಿದೆ. ಅವರೇ ಕೂಲಿಗಳು ಮತ್ತು ಪೋನಿಗಳು (ಮರಿ ಕುದುರೆಗಳು). ಇವರು ಸೈನಿಕರಿಗೆ ಸಾಗಿಸಬೇಕಾದ ವಸ್ತುಗಳನ್ನು ಚಿಕ್ಕ ಚಿಕ್ಕ ಮೂಟೆಗಳನ್ನಾಗಿ ಕಟ್ಟಿ, ತಾವು ಹೊತ್ತುಕೊಂಡು ಹೋಗುತ್ತಾರೆ ಮತ್ತು ಪೋನೀಗಳ ಮೇಲೆ ಹೋರಿಸಿ ಸಾಗಿಸುತ್ತಾರೆ. ಇವರು ಈ ಕೊರೆಯುವ ಚಳಿಯಲ್ಲಿ ಜಗ್ಗದೆ, ಬಗ್ಗದೆ ಸುಮಾರು 1000 ಕಿ.ಮೀ. ವರೆಗೂ ನಡೆದುಕೊಂಡು ಹೋಗುತ್ತಾರೆ. ಬೆಟ್ಟ ಪರ್ವತಗಳು, ಕಣಿವೆಗಳು ನೀಡುವ ಸಂಕಷ್ಟ ಪರಿಸ್ಥಿತಿಗಳನ್ನು ಸಹಿಸಿಕೊಂಡು, ಚಳಿ ಮಳೆಯ ವಾತಾವರಣಕ್ಕೆ ಎದುರೊಡ್ಡಿ ಸಾಗಿ ಸೈನಿಕರಿಗೆ ಬೇಕಾದ ವಸ್ತುಗಳನ್ನು ತಲುಪಿಸುತ್ತಾರೆ. ಇವರ ಸೇವೆ ಇಲ್ಲವಾದರೆ ಸೈನಿಕರ ಪರಿಸ್ಥಿತಿ ಹದಗೆಡುತ್ತದೆ.

ನಮ್ಮ ಸೈನಿಕರು ನಿರ್ಭಯವಾಗಿ, ದೇಶದ ಗಡಿ ಪ್ರದೇಶದುದ್ದಕ್ಕೂ ಕಾಯಬೇಕೆಂದರೆ, ದೇಶ ಪ್ರಜೆಗಳ ಸತತ ಪ್ರೋತ್ಸಾಹ ಸಹಕಾರ ಬೇಕೇ ಬೇಕು. ಅಲ್ಲದೆ, ಕೇಂದ್ರ ಸಕರ್ಾರವು ಸಹ ತ್ರಿವಿಧ ಸೈನಿಕ ದಳಗಳಿಗೆ ಆಥರ್ಿಕವಾಗಿ, ಶಸ್ತ್ರಾಸ್ತ್ರ ಪೂರೈಕೆಗಳ ವಿಷಯವಾಗಿ, ಸೈನಿಕರ ಕುಟುಂಬ ಪೋಷಣೆಗೆ ತೊಂದರೆಯಾಗದಂತೆ ಸೈನಿಕರಿಗೆ ಧೈರ್ಯ ಹೇಳುವ ವಿಷಯದಲ್ಲಿ ಪೂರ್ಣವಾದ ಬೆಂಬಲ, ಸಹಕಾರ, ಹೇರಳವಾಗಿ ಮಂಜೂರಾತಿಗಳನ್ನು ನೀಡಿದಲ್ಲಿ ಸೈನಿಕರಿಗೆ ಮನೋಬಲ ದೊರೆತು, ಎಂಥಹ ಕ್ಲಿಷ್ಟ ಪರಿಸ್ಥಿತಿಯಲ್ಲಾಗಲಿ ನೆಮ್ಮದಿಯಿಂದ ನಿರ್ಭಯದಿಂದ ಕಾರ್ಯನಿರ್ವಹಿಸುತ್ತಾರೆ. ಅವರ ಸುರಕ್ಷತೆಯೇ ನಮ್ಮ ಸುರಕ್ಷತೆ




Leave a Reply

Your email address will not be published. Required fields are marked *

error: Content is protected !!