ವಿಶ್ವಸಂಸ್ಥೆ ಪ್ರಶಸ್ತಿಗೆ ಭಾಜನರಾದ ನಟ ಸೋನು ಸೂದ್

285

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಸೋನು ಸೂದ್ ಅವರಿಗೆ ವಿಶ್ವ ಸಂಸ್ಥೆ ಪ್ರತಿಷ್ಠಿತ ಎಸ್ ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನ ನೀಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಭಾರತೀಯರಿಗಾಗಿ ಇವರು ಸಲ್ಲಿಸಿದ ಸೇವೆಗೆ ಈ ಒಂದು ಪ್ರಶಸ್ತಿ ನೀಡಿ ಗೌರವಿಸಲಾಗ್ತಿದೆ.

ವಲಸೆ ಕಾರ್ಮಿಕರಿಗಾಗಿ ವಿಶೇಷ ಬಸ್, ವಿಮಾನ ವ್ಯವಸ್ಥೆ, ಊಟ, ಬಟ್ಟೆ ಸಹಾಯ. ವಿದ್ಯಾರ್ಥಿಗಳಿಗೆ ನೆರವು, ಕೆಲಸವಿಲ್ಲದವರಿಗೆ ಆರ್ಥಿಕ ನೆರವು, ವೃದ್ಧರಿಗೆ ಸಹಾಯ ಸೇರಿದಂತೆ ದೇಶದ ತುಂಬಾ ಇವರು ಅಸಂಖ್ಯಾತ ಜನರಿಗೆ ಸಹಾಯ ಮಾಡಿದ್ರು. ಅವರ ಈ ನಿಸ್ವಾರ್ಥ ಸೇವೆಗೆ ವಿಶ್ವ ಸಂಸ್ಥೆಯ ಪ್ರಶಸ್ತಿ ಲಭಿಸಿದೆ. ಸೋಮವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ.

ಇದೊಂದು ವಿಶೇಷ ಗೌರವ. ನನ್ನ ದೇಶದ ಜನರಿಗೆ ನಾನು ಮಾಡಿದ ಸಣ್ಣ ಸಹಾಯಕ್ಕೆ ದೊಡ್ಡ ಗೌರವ ಸಿಕ್ಕಿದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ. ಸ್ಕ್ರಿನ್ ಮೇಲೆ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಸೂದ್ ರಿಯಲ್ ಲೈಫ್ ನಲ್ಲಿ ಹೀರೋ ಆದ್ರು.




Leave a Reply

Your email address will not be published. Required fields are marked *

error: Content is protected !!