78ರಲ್ಲೂ ಭರ್ಜರಿ ಸ್ಟೆಪ್ಸ್

530

ಇವತ್ತಿನ ಫಾಸ್ಟ್ ಫುಡ್ ಲೈಫ್ ನಲ್ಲಿ 35, 40 ವಯಸ್ಸಿಗೆ ಜೀವನ ಹೈರಾಣು ಅಂತಾರೆ. 50,60ರ ಹತ್ತಿರ ಬಂದವರಂತೂ ಮುಂಜಾನೆ, ಸಂಜೆ ಪಾರ್ಕ್ ನಲ್ಲಿ ವಾಕ್ ಮಾಡಲು ಬರ್ತಾರೆ. ಒಂದೆರಡು ರೌಂಡ್ ಹೊಡಿಯುತ್ತಿದ್ದಂತೆ ಉಸ್ ಅಂತಾರೆ. ಆದ್ರೆ, ಇಲ್ಲೊಬ್ಬಳು ಅಜ್ಜಿ ಇದ್ದಾಳೆ. ಇವಳಿಗೆ ವಯಸ್ಸು ಅನ್ನೋದು ಲೆಕ್ಕಕ್ಕೆ ಇಲ್ಲ. ಹೀಗಾಗಿ ಇಳಿ ವಯಸ್ಸಿನಲ್ಲಿಯೂ ಬಿಸಿರಕ್ತದ ಹುಡ್ಗರ ರೀತಿ ಲೈಫ್ ಲೀಡ್ ಮಾಡ್ತಿದ್ದಾಳೆ.

ಯಸ್, ಈಕೆಗೆ ಜಸ್ಟ್ 78. ಇದು ಇವಳ ದೇಹಕ್ಕಾದ ವಯಸ್ಸು. ಮನಸ್ಸು ಮಾತ್ರ ಇನ್ನೂ 18 ವರ್ಷದ ಹುಡ್ಗಿಯರಂತೆ ಕುಣಿಯುತ್ತೆ. ಹೀಗಾಗಿಯೇ ಇಂದಿಗೂ ಬ್ಯಾಲೆಟ್ ಡ್ಯಾನ್ಸ್ ಮಾಡ್ತಿದ್ದಾಳೆ ಈ ಅಜ್ಜಿ. ಲಂಡನ್ ಮೂಲದ ಸುಝಲ್ ಪೂಲೆ, 7 ವರ್ಷದ ಹುಡ್ಗಿಯಿದ್ದಾಗ ಬ್ಯಾಲೆಟ್ ಡ್ಯಾನ್ಸ್ ಕಲಿಯಲು ಶುರು ಮಾಡಿದವಳು. ಇದೀಗ ಈಕೆಗೆ 78 ವರ್ಷ. ಈಗ್ಲೂ ಸಹ ವೇದಿಕೆ ಮೇಲೆ ಕುಣಿದಾಡ್ತಾಳೆ. ಮೊಮ್ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕ್ತಾಳೆ ಪೂಲೆ.

ಪೂಲೆ ಹೇಳುವ ಪ್ರಕಾರ ಬ್ಯಾಲೆಟ್ ಡ್ಯಾನ್ಸ್ ನಲ್ಲಿ 30 ವರ್ಷಕ್ಕೆ ನಿವೃತ್ತಿ ಹೊಂದುತ್ತಾರೆ. 40, 50 ವರ್ಷದ ತನಕ ಇದರಲ್ಲಿ ಉಳಿಯುವುದೇ ಇಲ್ಲ. ಆದ್ರೆ, ನಾನು ಈಗ್ಲೂ ಡ್ಯಾನ್ಸ್ ಮಾಡ್ತಿರೋದು ಖುಷಿ ನೀಡ್ತಿದೆ ಅಂತಾಳೆ. ನನ್ಗೆ ಬಲಿಷ್ಟವಾದ ಪಾದ, ಶಕ್ತಿಶಾಲಿಯಾದ ಮೊಣಕಾಲು ಹಾಗೂ ಬೆನ್ನಿನಲ್ಲಿ ಅತ್ಯಂತ ಸಾಮರ್ಥ್ಯವಿದೆ. ಹೀಗಾಗಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡ್ತೀನಿ ಅಂತಾಳೆ.

 ಎರಡನೇ ವಿಶ್ವಯುದ್ಧ ನಡೆಯುತ್ತಿರುವ ಟೈಂನಲ್ಲಿ ಜನಿಸಿದಾಕೆ. ಒಮ್ಮೆ ಆಸ್ಪತ್ರೆಯಲ್ಲಿ ಇರುವಾಗ ಬಾಂಬ್ ಸ್ಫೋಟವಾಯ್ತಂತೆ. ಅಲ್ಲಿಂದ ತಾಯಿ, ಮಗು ಎಸ್ಕೇಪ್ ಆಗ್ತಾರೆ. ಆದ್ರೆ, ಇದರಲ್ಲಿ 2 ವರ್ಷದ ಪೂಲೆಗೆ ಗಾಯಗಳಾಗಿರ್ತವೆ. ಆಗ ಕುತ್ತಿಗೆ ಆಪರೇಷನ್ ಮಾಡ್ತಾರಂತೆ. ಇದಾದ ನಂತರ ಪೂಲೆ ಇಲ್ಲಿಯವರೆಗೂ ಒಂದೇ ಒಂದು ಆಪರೇಷನ್ ಮಾಡಿಸಿಕೊಂಡಿಲ್ಲ ಅಂತಾಳೆ.

ಜೀವಮಾನ ಸಾಧನೆಗೆ ‘ಲವ್ ಆಫ್ ಡ್ಯಾನ್ಸ್’ ಪ್ರಶಸ್ತಿ

ಕೆಲ ವರ್ಷಗಳ ಹಿಂದೆ ಮನೆಯ ಮಹಡಿಯಿಂದ ಬಿದ್ದು ಕೈಗೆ ಒಂದಿಷ್ಟು ಪೆಟ್ಟಾಗಿದ್ದು ಬಿಟ್ರೆ ಈಗ್ಲೂ ಗಟ್ಟಿಮುಟ್ಟಾಗಿರುವ ಪೂಲೆ, ಕಳೆದ 15 ವರ್ಷಗಳಿಂದ ಲಂಡನ್ ನ ‘ರಾಯಲ್ ಬ್ಯಾಲೆಟ್ ಡ್ಯಾನ್ಸ್ ಅಕಾಡೆಮಿಯ’ ಸದಸ್ಯೆಯಾಗಿದ್ದಾಳೆ.

ಡ್ಯಾನ್ಸ್, ಮ್ಯೂಸಿಕ್ ಅಂದ್ರೆ ಪೂಲೆಗೆ ಪಂಚಪ್ರಾಣ. ಇವಳ ಈ ಉತ್ಸಾಹಕ್ಕೆ ಇಡೀ ಇಂಗ್ಲೆಂಡ್ ಶಾಕ್ ಆಗಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ಪೂಲೆಗೆ 2018ರಲ್ಲಿ ಜೀವಮಾನ ಸಾಧನೆಗಾಗಿ ‘ಲವ್ ಆಫ್ ಡ್ಯಾನ್ಸ್’ ಪ್ರಶಸ್ತಿ ನೀಡಲಾಗಿದೆ. ಕಳೆದ ವರ್ಷ ಪತಿಯನ್ನ ಕಳೆದುಕೊಂಡಿರುವ ಸುಝೆಲ್ ಪೂಲೆ ವಾರದಲ್ಲಿ 6 ದಿನ ವಿದ್ಯಾರ್ಥಿಗಳಿಗೆ ಬ್ಯಾಲೆಟ್ ಡ್ಯಾನ್ಸ್ ಹೇಳಿಕೊಡುತ್ತಾ ಖುಷಿಯಾಗಿದ್ದಾಳೆ.

ಮನಷ್ಯನಿಗೆ ವಯಸ್ಸು ಅನ್ನೋದು ಯಾವತ್ತಿಗೂ ಮ್ಯಾಟರ್ ಅಲ್ಲ ಅಂತಾ ನೂರಾರು ಜನ ತೋರಿಸಿದ್ದಾರೆ. ವಿಲ್ ಪವರ್ ಯಾರಲ್ಲಿ ಇರುತ್ತೋ ಅವರು ಏನ್ ಬೇಕಾದ್ರೂ ಮಾಡ್ತಾರೆ. ಅದಕ್ಕೆ ಸುಝಲ್ ಪೂಲೆ ಅಂತವರು ಸಾಕ್ಷಿಯಾಗಿ ನಮ್ಮ ಕಣ್ಮುಂದೆ ಇದ್ದಾರೆ.




Leave a Reply

Your email address will not be published. Required fields are marked *

error: Content is protected !!