ರಾಜ್ಯದಲ್ಲಿ ಹತ್ತುತ್ತಾ ತಳವಾರ, ಪರಿವಾರದ ಕಿಚ್ಚು?

1092

ಪ್ರಜಾಸ್ತ್ರ ವಿಶೇಷ ವರದಿ

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈಗಾಗ್ಲೇ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಪ್ರಕಾರ, ರಾಜ್ಯದಲ್ಲಿರುವ ತಳವಾರ, ಪರಿವಾರ ಹಾಗೂ ಸಿದ್ದಿ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದ್ರೆ, ಇದೀಗ ತಳವಾರ, ಪರಿವಾರ ಪದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ.

ವಾಲ್ಮೀಕಿ ಸಮುದಾಯದಲ್ಲಿ ಬರುವ ನಾಯಕ, ನಾಯ್ಕಡ, ಮೋಟ ನಾಯಕದಂತೆ ತಳವಾರ ಹಾಗೂ ಪರಿವಾರ ಸಹ ವಾಲ್ಮೀಕಿ ಸಮುದಾಯದ ಜಾತಿಗಳಾಗಿದ್ದು, ಈ ವರ್ಗಕ್ಕೆ ಸೇರಿದವರು ಮಾತ್ರ ಪರಿಶಿಷ್ಟ ಪಂಗಡವೆಂದು ಅಧಿಸೂಚನೆ ಹೊರಡಿಸಲಾಗಿದೆ. ಅಂಬಿಗ, ಕೋಲಿ ಸಮಾಜದಲ್ಲಿ ಬರುವ ತಳವಾರ, ಪರಿವಾರಕ್ಕೆ ಇದು ಅನ್ವಯವಾಗುವುದಿಲ್ಲ. ಹೀಗಾಗಿ ಈ ಜಾತಿಯವರಿಗೆ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಈಗಾಗ್ಲೇ ವಾಲ್ಮೀಕಿ ಸಮಾಜದ ಸ್ವಾಮೀಜಿಗಳಾದಿಯಾಗಿ, ಸಂಘಟನೆಗಳು, ಮುಖಂಡರು ಮನವಿ ಪತ್ರ ಸಲ್ಲಿಸ್ತಿದ್ದಾರೆ.

ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ, ಇತರೆ ಸಮುದಾಯದಲ್ಲಿ ಬರುವ ತಳವಾರ, ಪರಿವಾರ ಹೆಸರುಗಳಿಗೆ ಎಸ್ಟಿ ಎಂದು ನೀಡಬಾರದು ಎಂದು ಒತ್ತಾಯ ಮಾಡ್ತಿದ್ದಾರೆ. ಆದ್ರೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು, ಜೂನ್ 1ರಂದು ವಿಜಯಪುರಕ್ಕೆ ಭೇಟಿ ನೀಡಿದ ವೇಳೆ ಜಿಲ್ಲೆಯಲ್ಲಿರುವ ಅಂಬಿಗೆರೆಲ್ಲ ತಳವಾರವೆಂದು ಬರೆಸಿ ಎಸ್ಟಿ ಸರ್ಟಿಫಿಕೇಟ್ ಪಡೆಯಹುದು ಎಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇದು ಕಿಚ್ಚು ಹತ್ತುತ್ತಾ? ಎರಡು ಹಿಂದೂಳಿದ ಹಾಗೂ ಬುಡಕಟ್ಟು ಸಂಪ್ರದಾಯ ಹೊಂದಿದ ಪಂಗಡಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಾ ಅನ್ನೋ ಕುತೂಹಲ ಮೂಡಿದೆ.

ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿ ತಳವಾರ/ಪರಿವಾರದವರು ಎಂದು ಕರೆಸಿಕೊಳ್ಳುವ ಎಲ್ಲರೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯಬಹುದು ಎನ್ನುತ್ತಾ? ಇದು ವಾಲ್ಮೀಕಿ ಸಮಾಜಕ್ಕೆ ಸೇರಿದ ಜಾತಿಗಳಿಗೆ ಮಾತ್ರಾ ಎಂದು ಹೇಳುತ್ತಾ ಗೊತ್ತಿಲ್ಲ. ಆದ್ರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೊಸ ಸ್ವರೂಪ ಪಡೆದುಕೊಳ್ಳುವುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ. ಪರಿಶಿಷ್ಟ ಪಂಗಡಕ್ಕೆ ಸೇರಿಕೊಳ್ಳುವ ಎಲ್ಲ ಅರ್ಹತೆ ಇದ್ದರೂ ನಮಗೆ ಮೊದಲಿನಿಂದಲೂ ಅನ್ಯಾಯ ಮಾಡಿಕೊಂಡು ಬರ್ತಿರುವವರ ವಿರುದ್ಧ ತಳವಾರ ಸಮಾಜದವರು ಬೀದಿಗೆ ಇಳಿಯುತ್ತಾರಾ ಅನ್ನೋ ಯಕ್ಷಪ್ರಶ್ನೆಯಿದೆ.




Leave a Reply

Your email address will not be published. Required fields are marked *

error: Content is protected !!