ಎಸ್ಟಿ ಪ್ರಮಾಣ ಪತ್ರಕ್ಕಾಗಿ ತಳವಾರ ಸಮಾಜದಿಂದ ಚಳವಳಿ

371

ಪ್ರಜಾಸ್ತ್ರ ಸುದ್ದಿ

ಜೇವರ್ಗಿ: ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಸಂಬಂಧ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನಲ್ಲಿ ತಳವಾರ-ಪರಿವಾರ ಸಮಾಜದ ವತಿಯಿಂದ ರ್ಯಾಲಿ ಹಾಗೂ ಚಳಿವಳಿ ಮಾಡಲಾಗಿದೆ. ಎಸ್.ಟಿ ಹೋರಾಟ ಸಮಿತಿ ವತಿಯಿಂದ ಪಟ್ಟಣದಲ್ಲಿಂದು ರ್ಯಾಲಿ ನಡೆಸಲಾಯ್ತು.

ತಳವಾರ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಕವಾಗಿ ಹಿಂದುಳಿದಿದ್ದು, ಈ ಮಾನದಂಡಗಳ ಆಧಾರದ ಮೇಲೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿವೆ. ಆದ್ರೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅನಗತ್ಯವಾಗಿ ಗೊಂದಲ ಸೃಷ್ಟಿಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕ್ತಿದ್ದಾರೆ. ಕೂಡಲೇ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯದ ಎಲ್ಲ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಎಸ್ಟಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಲಾಯ್ತು.

ರ್ಯಾಲಿ ನಡೆಸಿದ ಬಳಿಕ ಮಿನಿ ವಿಧಾನಸೌಧಕ್ಕೆ ಆಗಮಿಸಿ, ತಹಶೀಲ್ದಾರ್ ಸಿದ್ದರಾಯ ಬೋಸಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯ್ತು. ಈ ವೇಳೆ ಜಿಲ್ಲಾಧ್ಯಕ್ಷ ವಸಂತ ನರಗೋಳಿ, ತಾಲೂಕಾಧ್ಯಕ್ಷ ರೇವಣಸಿದ್ಧ ಕಮಾನಮನಿ, ಭಗವಂತ ಬೆಣ್ಣೂರ, ಲೋಹಿತ ಯಂಕಂಚಿ, ಶಿವಶಂಕರ ಕಲ್ಲೂರ, ಪ್ರಕಾಶ ಮಂದೇವಾಲ, ಶಂಕರ ಯಂಕಂಚಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!