ಮಾಜಿ ಶಾಸಕ ದೊಡ್ಡಪ್ಪಗೌಡ ಬಿಜೆಪಿಗೆ ರಾಜೀನಾಮೆ

135

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆದ ಮೇಲೆ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಟಿಕೆಟ್ ಘೋಷಣೆಯಾದ್ಮೇಲೆ ಆ ಲೆಕ್ಕಾಚಾರ ಮತ್ತಷ್ಟು ಜೋರಿದೆ. ಹೀಗಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಬಿಜೆಪಿಯಿಂದ ಮತ್ತೊಬ್ಬ ಮುಖಂಡ ಹೊರ ನಡೆದಿದ್ದಾರೆ.

ಜೇವರ್ಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ದೊಡ್ಡಪ್ಪಗೌಡ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜೇವರ್ಗಿ ಟಿಕೆಟ್ ಶಿವನಗೌಡ ಪಾಟೀಲ ರದ್ದೇವಾಡಗಿ ಅವರಿಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ.

2008ರಲ್ಲಿ ಧರ್ಮಸಿಂಗ್ ಅವರನ್ನು ಸೋಲಸಿದ್ದ ದೊಡ್ಡಪ್ಪಗೌಡ, ಇದೀಗ ಜೆಡಿಎಸ್ ಅಥವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!