ನಟಿ ಸಂಯುಕ್ತ ಮೇಲೆ ಹಲ್ಲೆ: ನಟಿ ಪರ ನಿಂತ ಚಿತ್ರರಂಗದವರು

281

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೀಗ ನಡೆಯುತ್ತಿರುವುದು ಡ್ರಗ್ಸ್ ಚರ್ಚೆ. ಇದರ ಗದ್ದಲ, ಗಲಾಟೆ ನಡುವೆ ಕಿರಿಕ್ ನಟಿ ಸಂಯುಕ್ತಾ ಹೆಗಡೆ ಗಲಾಟೆಯೂ ಸೇರಿಕೊಂಡಿದೆ. ಸಂಯುಕ್ತ ಹೆಗಡೆ ಸದಾ ಒಂದಲ್ಲ ಒಂದು ವಿವಾದ ಮಾಡಿಕೊಳ್ತಾರೆ. ಇದೀಗ ಪಾರ್ಕ್ ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

https://twitter.com/SamyukthaHegde/status/1301951856298475520?s=20

ನಗರದ ಅಗರ ಪಾರ್ಕಿನಲ್ಲಿ ಸ್ನೇಹಿತೆಯರೊಂದಿಗೆ ಹೊಲಾ ಹೋಪ್ ಅಭ್ಯಾಸ ಮಾಡ್ತಿದ್ರು. ಹೀಗಾಗಿ ಸ್ಪೋರ್ಟ್ಸ್ ಡ್ರೆಸ್ ಹಾಕಿಕೊಂಡಿದ್ದಾರೆ. ಡ್ರೆಸ್ ವಿಚಾರಕ್ಕೆ ಪಾರ್ಕಿನಲ್ಲಿ ಕೆಲವರು ಸಂಯುಕ್ತಾಳೊಂದಿಗೆ ಜಗಳ ತೆಗೆದಿದ್ದಾರಂತೆ. ಅಲ್ದೇ, ಸಾಮಾಜಿಕ ಹೋರಾಟಗಾರ್ತಿ, ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ನಟಿ ಸಂಯುಕ್ತ ಹೆಗಡೆ ಮೇಲೆ ಹಲ್ಲೆ ಮಾಡಿದ್ದಾರೆ. ಅದು ವಿಡಿಯೋದಲ್ಲಿ ಸಹ ಕಾಣಿಸುತ್ತೆ.

ಅಲ್ದೇ, ಕೆಲವರು ಡ್ರಗ್ಸ್ ವಿಚಾರಕ್ಕೆ ಹೋಲಿಕೆ ಮಾಡಿ, ಡ್ರಗ್ಸ್ ಸಂಯುಕ್ತಾ ಡ್ರಗ್ಸ್ ಸಂಯುಕ್ತಾ ಎಂದು ಕೂಗಿ ಅವಮಾನ ಮಾಡಿ ಬೆದರಿಕೆ ಹಾಕಿರುವುದು ಸಹ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಇದೀಗ ಹ್ಯಾಶ್ ಟ್ಯಾಗ್ ಮೂಲಕ ನಟಿ ಸಂಯುಕ್ತಾ ಪರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಂಯುಕ್ತ ಪರ ನಿಂತಿದ್ದಾರೆ.

https://twitter.com/SanthoshAnand15/status/1302158515843207168?s=20

ನಟಿ ಮೇಘನಾ ಗಾಂವ್ಕರ್, ಪಾರೂಲ್ ಯಾದವ, ನಿರ್ದೇಶಕ ಸಂತೋಷ ಆನಂದರಾಮ ಸೇರಿದಂತೆ ಅನೇಕರು ಟ್ವೀಟರ್ ನಲ್ಲಿ ಬರೆಯುವ ಮೂಲಕ ಕವಿತಾ ರೆಡ್ಡಿ ಮೇಲೆ ಸೂಕ್ತ ಕಾನೂನು ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ನಾಯಕರು, ನಾಯಕಿಯರು ಕವಿತಾ ರೆಡ್ಡಿ ಮೇಲೆ ಮುಗಿಬಿದ್ದಿದ್ದಾರೆ.

https://twitter.com/MeghanaGaonkar/status/1302152078299521024?s=20



Leave a Reply

Your email address will not be published. Required fields are marked *

error: Content is protected !!