ಇಂದು 9746 ಕೋವಿಡ್ ಕೇಸ್.. 128 ಸಾವು..

274

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನ ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 9,746 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 3,89,232ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 9,102 ಜನರು ಇಂದು ಡಿಸ್ಚಾರ್ಜ್ ಆಗಿದ್ದು 2,83,298 ಜನರು ಇದುವರೆಗೂ ಗುಣಮುಖರಾಗಿದ್ದಾರೆ.

ಇನ್ನು 99,617 ಪ್ರಕರಣಗಳು ಸಕ್ರಿಯವಾಗಿದೆ. ಇದರ ಜೊತೆಗೆ ಇಂದು 128 ಜನರು ಸಾವನ್ನಪ್ಪಿದ್ದು, 6,298ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. 769 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 144, ಬಳ್ಳಾರಿ 366, ಬೆಳಗಾವಿ 473, ಬೆ.ಗ್ರಾ 124, ಬೆಂ. 3093, ಬೀದರ 119, ಚಾಮರಾಜನಗರ 31, ಚಿಕ್ಕಬಳ್ಳಾಪುರ 133, ಚಿಕ್ಕಮಗಳೂರು 238, ಚಿತ್ರದುರ್ಗ 240, ದ.ಕ 377, ದಾವಣಗೆರೆ 395, ಧಾರವಾಡ 227, ಗದಗ 195, ಹಾಸನ 347, ಹಾವೇರಿ 188, ಕಲಬುರಗಿ 198, ಕೊಡಗು 28, ಕೋಲಾರ 112, ಕೊಪ್ಪಳ 243, ಮಂಡ್ಯ 246, ಮೈಸೂರು 790, ರಾಯಚೂರು 186, ರಾಮನಗರ 92, ಶಿವಮೊಗ್ಗ 346, ತುಮಕೂರು 192, ಉಡುಪಿ 175, ಉ.ಕ 207, ವಿಜಯಪುರ 103, ಯಾದಗಿರಿ 138 ಜನರಲ್ಲಿ ಸೋಂಕು ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!