ಸಂಯುಕ್ತಾ ಜೊತೆ ಕಿರಿಕ್: ಕವಿತಾ ರೆಡ್ಡಿ ಅರೆಸ್ಟ್

323

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಳೆದ ಶುಕ್ರವಾರ ನಟಿ ಸಂಯುಕ್ತಾ ಹೆಗ್ಡೆ ಜೊತೆಗೆ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ, ಸರ್ಜಾಪುರ ರಸ್ತೆಯ ಅಗರ ಪಾರ್ಕ್ ನಲ್ಲಿ ಗಲಾಟೆ ಮಾಡಿಕೊಂಡಿದ್ರು. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ಬಟ್ಟೆ ತೊಟ್ಟಿದ್ದಾರೆ ಎಂದು ಹೇಳಿ ಗಲಾಟೆ ಆಗಿತ್ತು, ಕವಿತಾ ರೆಡ್ಡಿ ಹಲ್ಲೆ ಸಹ ನಡೆಸಿದ್ರು.

ಈ ಘಟನೆ ಸಂಬಂಧ ನಟಿ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಹೀಗಾಗಿ ಕವಿತಾ ರೆಡ್ಡಿ ಬಂಧನವಾಗಿದೆ. ಇನ್ನೋರ್ವ ಆರೋಪಿ ಅನಿಲ ರೆಡ್ಡಿ ಎಸ್ಕೇಪ್ ಆಗಿದ್ದಾನೆ. ಅಂದು ನಡೆದ ಗಲಾಟೆ ವೇಳೆ ನಟಿ ವಿರುದ್ಧ ಡ್ರಗ್ಸ್ ಪ್ರಕರಣ ತಳುಕು ಹಾಕಿ ನೈತಿಕ ಪೊಲೀಸಗಿರಿ ಪ್ರದರ್ಶನ ಮಾಡಲಾಗಿತ್ತು.

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದೀಗ ಕವಿತಾ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 164ಬಿ, 323, 224, 504, 506, 509ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!