ಧೋನಿ 1,800 ರೂಪಾಯಿ ಬಾಕಿ ವಿವಾದ

373

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಎಂ.ಎಸ್ ಧೋನಿ 1,800 ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರಾ? ಜಾಹೀರಾತು ಮೂಲಕವೇ ಕೋಟಿ ಕೋಟಿ ಗಳಿಸುವ ಧೋನಿಗೆ 1,800 ರೂಪಾಯಿ ಯಾವ ಲೆಕ್ಕ? ಯಾರಿಗೆ ಕೊಡಬೇಕು? ಏನು ಈ ಬಾಕಿ ಎಂದು ನಿಮ್ಗೆ ಕನ್ ಫ್ಯೂಸ್ ಆಗಿರಬೇಕು ಅಲ್ವಾ..

ಜಾರ್ಖಂಡ್ ಕ್ರಿಕೆಟ್ ಸಂಸ್ಥೆಗೆ ಧೋನಿ 1,800 ರೂಪಾಯಿ ಕೊಡಬೇಕಂತೆ. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಈ ಬಾಕಿ ದಾಖಲಾಗಿದೆ. ಅಲ್ಪ ಮೊತ್ತದ ಬಾಕಿ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿ ಧೋನಿ ಹೆಸರು ಕೆಡಿಸುವ ಕೆಲಸ ಮಾಡಲಾಗ್ತಿದೆ ಎಂದು ಅವರ ಫ್ಯಾನ್ಸ್ ಗರಂ ಆಗಿದ್ದಾರೆ.

ಈ ಹಿಂದೆ ಧೋನಿಗೆ ಜೆಎಸ್ ಸಿಎ ಗೌರವ ಸದಸ್ಯತ್ವ ನೀಡಿತ್ತು. ಧೋನಿ ಅಭಿಮಾನಿಗಳು ಪ್ರತಿಭಟನೆ ಮಾಡಿದ ಬಳಿಕ ಅವರಿಗೆ ಆಜೀವ ಸದಸ್ಯತ್ವ ನೀಡಲಾಯ್ತು. ಆಗ ಅವರ ಮನೆಗೆ ತೆರಳಿ ಸದಸ್ಯತ್ವದ 10 ಸಾವಿರ ರೂಪಾಯಿ ಪಡೆಯಲಾಗಿತ್ತು. ಆದ್ರೆ, ಇದೀಗ ಜಿಎಸ್ ಟಿ 1,800 ಬಾಕಿ ಇದೆ ಎಂದು ಹೇಳ್ತಿದೆ. ಅಂದೇ 11,800 ರೂಪಾಯಿ ಚೆಕ್ ಪಡೆಯಬಹುದಾಗಿತ್ತು. ಆಗ ತಾನು ಬೇಜವಾಬ್ದಾರಿ ತೋರಿ, ಇದೀಗ ಧೋನಿ ಮೇಲೆ ಅಪವಾದ ಮಾಡ್ತಿದ್ದಾರೆ ಎಂದು ಕಿಡಿ ಕಾರಲಾಗುತ್ತಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಸಾಥ್ ಪಾಠಕ್ ಎಂಬುವರು 1,800 ಕಲೆ ಹಾಕಿ, ಡ್ರಾಪ್ಟ್ ಮಾಡಲು ಹೋದ್ರೆ, ಯಾರಿಂದಲೋ ಹಣ ಪಡೆಯಲು ಆಗುವುದಿಲ್ಲ. ಧೋನಿ ಅಥವ ಅವರ ಸೂಚಿಸಿದ ವ್ಯಕ್ತಿ ಹಣ ನೀಡಬೇಕು ಎಂದು ಜೆಎಸ್ ಸಿಎ ಕಾರ್ಯದರ್ಶಿ ಸಂಜಯ ಸಾಹೇ ಹೇಳಿದ್ದಾರೆ. ಧೋನಿ ಈಗ ದುಬೈನಲ್ಲಿ ಐಪಿಎಲ್ ಗಾಗಿ ಹೋಗಿದ್ದು, ಇಲ್ಲಿ ವಿವಾದ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!