ಇಂದಿರಾ ಗಾಂಧಿ ಪುತ್ರನಿಂದ ಡಿಕೆಶಿ ತನಕ ತಿಹಾರ್ ಜೈಲು ಕಥೆ!

770

ಪ್ರಜಾಸ್ತ್ರ ನ್ಯೂಸ್ ಡೆಸ್ಕ್:

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ ಇಡಿ ವಶದಲ್ಲಿದ್ದಾರೆ. ಇವರ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿದ ಪರಿಣಾಮ ತಿಹಾರ್ ಜೈಲಿನಲ್ಲಿ ಇನ್ನು ಎರಡು ದಿನ ಕಳೆಯಬೇಕಾಗಿದೆ. ಈ ತಿಹಾರ್ ಜೈಲಿನಲ್ಲಿ ಯಾವೆಲ್ಲ ಘಟಾನುಘಟಿ ನಾಯಕರು ಬಂಧಿಯಾಗಿದ್ರು ಗೊತ್ತಾ?

ಸಂಜಯ ಗಾಂಧಿ:

ಜನತಾ ಪಕ್ಷದ ಎಂಪಿ ಅಮೃತಾ ನಹಾತಾ ನಿರ್ಮಿಸಿದ್ದ ‘ಕಿಸ್ಸಾ ಕುರ್ಸಿ ಕಾ ಚಿತ್ರ’ದಲ್ಲಿ ವಿವಾದಾತ್ಮಕ ಅಂಶಗಳಿವೆ ಎಂದು ಹೇಳಿ ಚಿತ್ರವನ್ನ ನಿರ್ಬಂಧಿಸಲಾಗಿತ್ತು. 1977ರಲ್ಲಿ ಚಿತ್ರದ ಪ್ರಿಂಟ್ ಗಳನ್ನೆಲ್ಲ ಸಂಜಯ ಗಾಂಧಿ ಹಾಗೂ ಅಂದಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವಿ.ಸಿ ಶುಕ್ಲಾ ನಾಶಪಡಿಸಿದ ಆರೋಪ ಎದುರಿಸಿದ್ರು. 11 ತಿಂಗಳ ನಡೆದ ವಿಚಾರಣೆಯ ತೀರ್ಪು 1979ರಲ್ಲಿ ಬಂದಿತ್ತು. ಆಗ ಇಂದಿರಾ ಗಾಂಧಿ ಪುತ್ರ ಸಂಜಯ ಗಾಂಧಿ ತಿಹಾರ್ ಜೈಲಿನ ಕಂಬಿ ಎಣಿಸಿದ್ರು.

ಸಂಜಯ ಗಾಂಧಿ

ಜಾರ್ಜ್ ಫರ್ನಾಂಡಿಸ್:

ತುರ್ತು ಪರಿಸ್ಥಿತಿ ಟೈಂನಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾಷಣ ಮಾಡ್ತಿದ್ದ ಕಡೆಯಲ್ಲ ಡೈನಮೈಟ್ ಸಿಡಿಸ್ತಿದ್ದ ಜಾರ್ಜ್ ಫರ್ನಾಂಡಿಸ್ ಮತ್ತು ಅವರ ಸಹಚರರನ್ನ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಬರೋಡಾದಲ್ಲಿ ಡೈನಮೈಟ್ ಸಿಡಿಸ್ತಿದ್ದ ಟೈಂನಲ್ಲಿ ಸಿಕ್ಕಿಬಿದ್ದಿದ್ರು. ಆಗ ತಿಹಾರ್ ಜೈಲು ಸೇರಿದ ಮೊದಲ ಕನ್ನಡಿಗ ಜಾರ್ಜ್ ಫರ್ನಾಂಡಿಸ್.

ಜಾರ್ಜ್ ಫರ್ನಾಂಡಿಸ್

ಕನ್ನಿಮೋಳಿ ಮತ್ತು ಎ.ರಾಜಾ:

2ಜಿ ಹಗರಣ 2008ರಲ್ಲಿ ಬೆಳಕಿಗೆ ಬಂದಿತು. ಇದ್ರಿಂದಾಗಿ ಸರ್ಕಾರಕ್ಕೆ ಬರೋಬ್ಬರಿ 1.76 ಲಕ್ಷ ಕೋಟಿ ನಷ್ಟವಾಗಿತ್ತು. ಆಗಿನ ಯುಪಿಎ ಸರ್ಕಾರ ಬೇಕಾಬಿಟ್ಟಿಯಾಗಿ ದೂರಸಂಪರ್ಕ ಲೈಸನ್ಸ್ ಕೊಟ್ಟ ಪ್ರಕರಣ ಇದಾಗಿತ್ತು. ಇದರಲ್ಲಿ ಡಿಎಂಕೆ ಪಕ್ಷದ ನಾಯಕ ದಿವಂಗತ ಕರುಣಾ ನಿಧಿ ಪುತ್ರಿ, ಸಂಸದೆ ಕನ್ನಿಮೋಳಿ ತಿಹಾರ್ ಜೈಲಿಗೆ ಹೋಗಿ ಬಂದ್ರು. ಇದೆ ಪ್ರಕರಣದಲ್ಲಿ ದೂರ ಸಂಪರ್ಕ ಇಲಾಖೆಯ ಮಾಜಿ ಸಚಿವ ಎ.ರಾಜಾ ತಿಹಾರ್ ಜೈಲಿಗೆ ಹೋಗಿ ಬಂದವರು.

ಕನ್ನಿಮೋಳಿ ಮತ್ತು ಎ.ರಾಜಾ

ಲಾಲು ಪ್ರಸಾದ ಯಾದವ:

ದೇಶದಲ್ಲಿ ಬಹುದೊಡ್ಡ ಸಂಚಲನ ಉಂಟು ಮಾಡಿದ ಹಗರಣ ಬಿಹಾರದ ಮೇವು ಹಗರಣ. ಇದರಲ್ಲಿ ಆರ್ ಜೆಡಿ ನಾಯಕ ಲಾಲು ಪ್ರಸಾದ ಯಾದವ ತಿಹಾರ್ ಜೈಲು ರುಚಿ ನೋಡಿದ್ರು. ಇದರಲ್ಲಿ ಲಾಲುಗೆ ಶಿಕ್ಷೆಯಾಗಿ ಈಗ್ಲೂ ಸಹ ಜೈಲುವಾಸ ಅನುಭವಿಸ್ತಿದ್ದಾರೆ.

ಲಾಲು ಪ್ರಸಾದ ಯಾದವ

ಸುರೇಶ ಕಲ್ಮಾಡಿ:

2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಟೂರ್ನಿಯಲ್ಲಿ ಬಹುದೊಡ್ಡ ಹಗರಣದ ಆರೋಪಿ ಸುರೇಶ ಕಲ್ಮಾಡಿ. 1996ರಿಂದ 2011ರ ವರೆಗೂ ಐಒಎ ಅಧ್ಯಕ್ಷರಾಗಿದ್ದ ಸುರೇಶ ಕಲ್ಮಾಡಿ ಸಾವಿರಾರು ಕೋಟಿ ರೂಪಾಯಿ ಹಗರಣದಲ್ಲಿ ಸಿಲುಕಿದ್ರು. ತಿಹಾರ್ ಜೈಲಿಗೆ ಹೋಗಿ ಬಂದ್ರು. ಭಾರತದಲ್ಲಿ ನಡೆದ ಮೊದಲ ಕಾಮನ್ ವೆಲ್ತ್ ಕೀಡಾಕೂಟವಿದು.

ಸುರೇಶ ಕಲ್ಮಾಡಿ

ಸುಬ್ರತ ರಾಯ್:

ಸಹರಾ ಗ್ರೂಪ್ ಕಂಪನಿಯ ಮುಖ್ಯಸ್ಥ ಸುಬ್ರತ ರಾಯ್, ಹೂಡಿಕೆದಾರರಿಗೆ 25 ಸಾವಿರದ 700 ಕೋಟಿ ಹಿಂದುರಿಗಿಸಲು ವಿಫಲರಾಗಿರುವ ಕಾರಣ ಇಂದಿಗೂ ವಿಚಾರಣೆ ಎದುರಿಸ್ತಿದ್ದಾರೆ. ಇವರ ಆಸ್ತಿ ಮಾರು ಹಣ ವಾಪಸ್ ಮಾಡಲು ಹೇಳಲಾಗಿತ್ತು. ಕೋರ್ಟ್ ಜಮೀನು ರಹಿತ ಬಂಧನ ವಾರೆಂಟ್ ನೀಡಿದ ಮೇಲೆ ತಿಹಾರ್ ಜೈಲು ವಾಸ ಅನುಭವಿಸಿದ್ರು.

ಸುಬ್ರತ ರಾಯ್

ಪಿ.ಚಿದಂಬರಂ:

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ವಿತ್ ಸಚಿವ ಈಗ್ಲೂ ತಿಹಾರ್ ಜೈಲಿನಲ್ಲಿಯೇ ಇದ್ದಾರೆ. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಪಿ.ಚಿದಂಬರಂ ಅವರನ್ನ ಸೆಪ್ಟೆಂಬರ್ 5ರಂದು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ.

ಪಿ.ಚಿದಂಬರಂ

ಹೀಗೆ ಅನೇಕ ಘಟಾನುಘಟಿ ರಾಜಕೀಯ ನಾಯಕರು ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ವಿಚಾರಣೆ ಕಾರಣಕ್ಕೆ ಬಂಧಿಯಾಗಿದ್ದಾರೆ. ಕರ್ನಾಟಕದ ಜಾರ್ಜ್ ಫರ್ನಾಂಡಿಸ್ ಬಳಿಕ ತಿಹಾರ್ ಜೈಲಿಗೆ ಹೋದವರು ಡಿ.ಕೆ ಶಿವಕುಮಾರ. ಹೀಗೆ ತಿಹಾರ್ ಜೈಲಿಗೆ ಹೋಗಿ ಬಂದ ಬಹುತೇಕರ ರಾಜಕೀಯ ಜೀವನ ಮುಗಿದಿದೆ. ಡಿಕೆಶಿ ಕಥೆ ಏನು ಅನ್ನೋದು ನೋಡಬೇಕು.

ಡಿ.ಕೆ ಶಿವಕುಮಾರ



Leave a Reply

Your email address will not be published. Required fields are marked *

error: Content is protected !!