ಸಂಭ್ರಮದ ಹೆಸರಿನಲ್ಲಿ ಕರೋನಾ ಹಂಚುತ್ತಿರುವ ಕಾರ್ಯಕರ್ತರು

252

ಪ್ರಜಾಸ್ತ್ರ ಸುದ್ದಿ

ನವದೆಹಲಿ: ತಮಿಳುನಾಡಿನಲ್ಲಿ ದಶಕದ ಬಳಿಕ ಡಿಎಂಕೆ ಅಧಿಕಾರಕ್ಕೆ ಬರ್ತಿದೆ. ಜಯಲಲಿತಾ ಸಾವಿನ ಬಳಿಕ ಎಐಡಿಎಂಕೆ ಒಳಜಗಳ, ಬಿಜೆಪಿ ಜೊತೆಗಿನ ಒಪ್ಪಂದ ನಡೆಯಿತು. ಡಿಎಂಕೆ ನಾಯಕ ಕರುಣಾನಿಧಿ ಸಾವಿನ ಬಳಿಕ ಸ್ಟಾಲಿನ್ ಮುಂದಿನ ನಾಯಕ ಎಂದಾದರು. ಅದರಂತೆ ಡಿಎಂಕೆ ಇದೀಗ ಗೆಲುವಿನತ್ತ ಹೆಜ್ಜೆ ಹಾಕಿದೆ. ಹೀಗಾಗಿ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸ್ತಿದ್ದಾರೆ. ಸಾಮೂಹಿಕ ಜನರು ಸೇರಿ ಸಿಹಿ ಹಂಚಿಕೆ, ಪಟಾಕಿ ಸಿಡಿಸಿ ಸಂಭ್ರಮ ಪಡ್ತಿದ್ದಾರೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸುತ್ತ ಮುನ್ನಡೆ ಸಾಧಿಸಿದೆ. 148 ಮ್ಯಾಜಿಕ್ ನಂಬರ್ ಇದೆ. ಇದನ್ನು ದಾಟಿಕೊಂಡು ಟಿಎಂಸಿ ಮುನ್ನಡೆ ಸಾಧಿಸಿದೆ. ಹೀಗಾಗಿ ಟಿಎಂಸಿ ಕಾರ್ಯಕರ್ತರು ಸಹ ಸಂಭ್ರಮ ಪಡ್ತಿದ್ದಾರೆ. ಚುನಾವಣೆ ಆಯೋಗ, ಕೋರ್ಟ್ ಸಹ ಚುನಾವಣೆ ಸಂಭ್ರಮ ಬೇಡವೆಂದು ಹೇಳಿದೆ. ಆದ್ರೂ, ಪಕ್ಷಗಳ ಕಾರ್ಯಕರ್ತರು ಎಲ್ಲವನ್ನೂ ಉಲ್ಲಂಘಿಸಿದ್ದಾರೆ. ಈ ಮೂಲಕ ಕರೋನಾ ಹಂಚಿಕೆ ಕೆಲಸ ನಡೆಯುತ್ತಿದೆ.

ದೇಶದಲ್ಲಿ ಕರೋನಾ ಆರ್ಭಟ ಜೋರಾಗಿದೆ. ಹೀಗಿದ್ರೂ ಸಹ ಕಾರ್ಯಕರ್ತರು ಎಲ್ಲವನ್ನು ಮರೆತು, ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಪಾಲಿಸದೆ ಕುಣಿದು ಕುಪ್ಪಳಿಸ್ತಿದ್ದಾರೆ. ಈ ಮೂಲಕ ಕರೋನಾ ಹಂಚಿಕೆ ಜೋರಾಗಿ ನಡೆದಿದೆ.


TAG


Leave a Reply

Your email address will not be published. Required fields are marked *

error: Content is protected !!