ಇಂದು ಮತ್ತೆ 49 ಸಂಸದರ ಅಮಾನತು: 141ಕ್ಕೆ ಏರಿದ ಸಂಖ್ಯೆ

163

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆಯ ವಿಪಕ್ಷಗಳ ಸಂಸದರನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಮಾನುತು ಮಾಡಿರುವುದಾಗಿದೆ. ಮಂಗಳವಾರ ಮತ್ತೆ 49 ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇದರೊಂದಿಗೆ 141 ಸದಸ್ಯರು ಅಮಾನತುಗೊಂಡಂತಾಗಿದೆ.

ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಮನೀಶ್ ತಿವಾರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಪ್ರಮುಖರಾಗಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಡೆಗೆ ಇಡೀ ದೇಶದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.

ಲೋಕಸಭೆಯಲ್ಲಿನ ಭದ್ರತೆ ಕುರಿತು ವಿಪಕ್ಷಗಳು ಕೇಳಿದ ಪ್ರಶ್ನೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಉತ್ತರಿಸುತ್ತಿಲ್ಲ. ಹೀಗಾಗಿ ಅವರ ಉತ್ತರಕ್ಕಾಗಿ ಪಟ್ಟು ಹಿಡಿಯಲಾಗುತ್ತಿದೆ. ಅಶಿಸ್ತಿನ ವರ್ತನೆ ಮತ್ತು ಸಭಾಪತಿ ನಿರ್ದೇಶನಗಳನ್ನು ಧಿಕ್ಕರಿಸಿದ ಕಾರಣಕ್ಕೆ ಗುಂಪು ಗುಂಪಾಗಿ ಸದಸ್ಯರ ಅಮಾನತು ಮಾಡಲಾಗುತ್ತಿದೆ. ಇದರೊಂದಿಗೆ 3 ದಿನದಲ್ಲಿ 141 ಸಂಸರನ್ನು ಹೊರಗೆ ಹಾಕಲಾಗಿದೆ. ಈ ನಡೆ ಖಂಡಿಸಿ ಸಂಸತ್ ಹೊರಗೆ ಇಂಡಿಯಾ ಮೈತ್ರಿಕೂಟ ಪ್ರತಿಭಟನೆ ನಡೆಸಿದೆ.




Leave a Reply

Your email address will not be published. Required fields are marked *

error: Content is protected !!