ಇಂದಿರಾ ಬಳಿಕ ನಿರ್ಮಲಾ ದಾಖಲೆ

452

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರದ ಮೊದಲ ಬಜೆಟ್ ಇಂದು ಮಂಡಿಸಲಾಗುತ್ತೆ. ಈ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ದೇಶದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಮೊಟ್ಟ ಮೊದಲ ಬಾರಿಗೆ ಸಂಸತ್ ನಲ್ಲಿ ಹಣಕಾಸು ಖಾತೆ ಸಚಿವೆಯೊಬ್ಬರು ಬಜೆಟ್ ಮಂಡಿಸಲಿದ್ದಾರೆ.

ವಿತ್ ಇಲಾಖೆಯ ಜವಾಬ್ದಾರಿ ಹೊತ್ತಿರುವ ಮೊದಲ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ತಮ್ಮ ಚೊಚ್ಚಲು ಬಜೆಟ್ ಮಂಡಿಸಲಿದ್ದಾರೆ. ಇದು ಸಂಸತ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಇವರ ಜೋಳಿಗೆಯಲ್ಲಿ ಏನಿದೆ? ಏನಿಲ್ಲ? ಅನ್ನೋ ಕುತೂಹಲ ದೇಶದ ಪ್ರತಿಯೊಬ್ಬರ ನಾಗರಿಕರಲ್ಲಿದೆ.

ಫೆಬ್ರವರಿ 1ರಂದು ಅಂದಿನ ವಿತ್ ಸಚಿವ ಪಿಯೂಶ ಗೊಯಲ್ ಅವರು ಮಧ್ಯಂತರ ಬಜೆಟ್ ಮಂಡಿಸಿದ್ರು. ಅದರಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನ ನಿರ್ಮಲಾ ಸೀತಾರಾಮನ್ ಅವರು ಮುಂದುವರೆಸಿಕೊಂಡು ಹೋಗುವ ಸಾಧ್ಯತೆಯಿದೆ. ಇದರ ಜೊತೆಗೆ ಹೊಸ ಯೋಜನೆಗಳನ್ನ ಬಜೆಟ್ ನಲ್ಲಿ ಘೋಷಣೆ ಮಾಡುವ ಸಾಧ್ಯತೆಯಿದೆ.


TAG


Leave a Reply

Your email address will not be published. Required fields are marked *

error: Content is protected !!