ಮೊದಲ ಹಣಕಾಸು ಸಚಿವೆಯ ಮೊದಲ ಬಜೆಟ್

393

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಇಂದು ಮಂಡನೆಯಾಗಲಿದೆ. ಮೊದಲ ಬಾರಿಗೆ ದೇಶದ ಮಹಿಳಾ ಹಣಕಾಸು ಸಚಿವರಾಗಿ ಆಯ್ಕೆಯಾದ ನಿರ್ಮಲಾ ಸೀತಾರಮನ್ ಅವರು ಇಂದು ತಮ್ಮ ಮೊದಲ ಬಜೆಟ್ ಮಂಡಿಸಲಿದ್ದಾರೆ.

ತಮ್ಮ ಮೊದಲ ಬಜೆಟ್ ನಲ್ಲಿ ಆರ್ಥಿಕ ಕುಸಿತ, 45 ವರ್ಷಗಳ ಬಳಿಕ ಅತೀ ಹೆಚ್ಚು ನಿರುದ್ಯೋಗ ಸಮಸ್ಯೆ ಎದುರಿಸ್ತಿರೋದು, ಖಾಸಗಿ ಹೂಡಿಕೆಗಳು, ಹಣಕಾಸು ಕುಸಿತು, ಏರಿಕೆಯಾಗ್ತಿರುವ ಎನ್ಪಿ ಹಾಗೂ ಎನ್ಬಿ ಸೇರಿದಂತೆ ಪ್ರಮುಖ ಅಂಶಗಳ ಕುರಿತು ಬಜೆಟ್ ಮಂಡಿಸಲಿದ್ದಾರೆ ಅನ್ನೋ ಮಾಹಿತಿ ತಿಳಿದು ಬಂದಿದೆ.

ಅರುಣ್ ಜೇಟ್ಲಿ ಬಳಿಕ ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಮನ್ ಆಯ್ಕೆಯಾಗಿದ್ದಾರೆ. ಈ ಹಿಂದೆ ರಕ್ಷಣಾ ಸಚಿವೆಯಾಗಿದ್ದ ಇವರು, ತಮ್ಮ ವಾಗ್ಬಾಣಗಳ ಮೂಲಕ ಪ್ರತಿಪಕ್ಷಗಳನ್ನ ಕಟ್ಟಿ ಹಾಕ್ತಿದ್ರು. ರಫೇಲ್ ಯುದ್ಧ ವಿಮಾನದ ಖರೀದಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾದಗ ವಿರೋಧ ಪಕ್ಷದವರನ್ನ ಸಮರ್ಥವಾಗಿ ಎದುರಿಸಿದರು. ಈ ಎಲ್ಲ ಕಾರಣಗಳಿಂದ ಇವರಿಗೆ ಹಣಕಾಸು ಖಾತೆ ಒಲಿದಿದೆ ಅನ್ನೋ ಮಾತಿದೆ.

ಮೊದಲ ಬಾರಿಗೆ ಮಹಿಳಾ ಹಣಕಾಸು ಸಚಿವರೊಬ್ಬರ ಮಂಡಿಸ್ತಿರುವ ಬಜೆಟ್ ಇದಾಗಿದ್ದು, ದೇಶದ ಜನತೆ ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!