ಅಮೆರಿಕಾದೊಂದಿಗೆ ಎನ್ ಡಿಎ ಮೊದಲ ಡೀಲ್

402

ನೂತನ ಕೇಂದ್ರ ಸರ್ಕಾರ ಮೊದಲ ಬಾರಿಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ದೊಡ್ಡ ಮಟ್ಟದ ಒಪ್ಪಂದವನ್ನ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗ್ತಿದೆ. ಅಮೆರಿಕಾದೊಂದಿಗೆ ಬರೋಬ್ಬರಿ 17 ಸಾವಿರದ 500 ಕೋಟಿ ಮೌಲ್ಯದ ಡೀಲ್ ಇದಾಗಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ.

ನೌಕಾಪಡೆಗೆ ಇನ್ನಷ್ಟು ಶಕ್ತಿ ತುಂಬಲು, ಜಲಂತರ್ಗಾಮಿ ಯುದ್ಧ ನೌಕೆಗಳನ್ನ ಖರೀದಿಸಲು ಮುಂದಾಗಿದೆಯಂತೆ. ಲಾಕ್ಹೀಡ್ ಮಾರ್ಟಿನ್ ಸಿಕರ್ಸ್ಕಿ ಎಂಹೆಚ್-60ಆರ್ ಹೆಸರಿನ 24 ಮಲ್ಟಿ ರೋಲ್ ಹೆಲಿಕಾಪ್ಟರ್ ಖರೀದಿ ಮಾಡ್ತಿದೆಯಂತೆ.

ಅಮೆರಿಕಾದ ವಿದೇಶಿ ಮಿಲಿಟರಿ ಮಾರಾಟ ನಿಮಯದಡಿ ಖರೀದಿ ಮಾಡಲಾಗ್ತಿದೆಯಂತೆ. ಅಂದ್ರೆ, ಸರ್ಕಾರದಿಂದ ಸರ್ಕಾರಕ್ಕೆ ಮಾರಾಟ ಮಾಡುವ ನಿಯಮವಾಗಿದೆ. ಇದಕ್ಕಾಗಿ ಬರೋಬ್ಬರಿ 17 ಸಾವಿರದ 500 ಕೋಟಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!