ಬ್ಲೂ ಬಾಯ್ಸ್ ಫಸ್ಟ್ ಫೈಟ್

423

ವರ್ಲ್ಡ್ ಕಪ್ ಮಹಾ ಕದನ ಶುರುವಾಗಿ ಅದಾಗ್ಲೇ ಒಂದು ವಾರ ಆಗ್ತಾ ಬರ್ತಿದೆ. ಭಾರತೀಯ ಅಭಿಮಾನಿಗಳಲ್ಲಿ ಮಾತ್ರ ಒಂದಿಷ್ಟು ಕ್ರೇಜ್ ಕಡಿಮೆಯಿತ್ತು. ಕಾರಣ ಬ್ಲೂ ಬಾಯ್ಸ್ ಮ್ಯಾಚ್ ಶುರುವಾಗಿರ್ಲಿಲ್ಲ. ಇಂದು ತನ್ನ ಮೊದಲ ಪಂದ್ಯವನ್ನ ದಕ್ಷಿಣ ಆಫಿಕ್ ವಿರುದ್ಧ ಭಾರತ ಆಡ್ತಿದೆ. ಹೀಗಾಗಿ ಟೀಂ ಇಂಡಿಯಾದ ಅಭಿಮಾನಿಗಳಲ್ಲಿ ಜೋಶ್ ಬಂದಿದೆ. ಯಾವುದೇ ಕ್ರಿಕೆಟ್ ಸರಣಿ ಇರ್ಲಿ, ಅಲ್ಲಿ ಭಾರತ ಇದ್ರೆ ಮಾತ್ರ ಅದ್ಕೊಂದು ಎನರ್ಜಿ ಬರೋದು. ಇನ್ನು ವಿಶ್ವಕಪ್ ಅನ್ನೋ ಮಹಾ ಕದನದಲ್ಲಿ ಭಾರತ ಎಂಟ್ರಿ ಆಗುವ ತನಕ ಯಾರಿಗೂ ಎನರ್ಜಿ ಬರುವುದೇ ಇಲ್ಲ.!

ಎರಡು ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡಿರುವ ಭಾರತ ತಂಡ, ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ಟೀಂಗಳಲ್ಲಿ ಒಂದಾಗಿದೆ. ವಿರಾಟ್ ಕೊಹ್ಲಿ ಟೀಂ ಸಕಲ ರೀತಿಯಿಂದ ಸಜ್ಜಾಗಿದ್ದು, ಚೋಕರ್ಸ್ ಹಣೆಪಟ್ಟಿ ಅಂಟಿಸಿಕೊಂಡಿರುವ ಸೌಥ್ ಆಫ್ರಿಕ್ ವಿರುದ್ಧ ಕಣಕ್ಕೆ ಇಳಿಯುತ್ತಿದೆ. ಹೀಗಾಗಿ ಮೊದಲ ಪಂದ್ಯವೇ ಹೈವೋಲ್ಟೇಜ್ ನಿಂದ ಕೂಡಿದೆ. ಈ ಸರಣಿಯಲ್ಲಿ ಭಾರತಕ್ಕೆ ಇಂದು ಮೊದಲ ಪಂದ್ಯವಾದ್ರೆ, ಸೌಥ್ ಆಫ್ರಿಕ್ ಕ್ಕೆ ಮೂರನೇ ಪಂದ್ಯ. ಕಳೆದ ಎರಡೂ ಪಂದ್ಯಗಳಲ್ಲಿ ಸೋತಿರುವ ಆಫ್ರಿಕಾಗೆ ಗೆಲ್ಲುವ ತವಕ. ಗೆಲುವಿನೊಂದಿಗೆ ಸರಣಿಯನ್ನ ಶುಭಾರಂಭ ಮಾಡುವುದು ಟೀಂ ಇಂಡಿಯಾದ ಆಸೆಯಾಗಿದೆ.

ಭಾರತದ ದಂತಕಥೆಯಾದ ಕಪಿಲ್ ದೇವ್ ನಾಯಕತ್ವದಲ್ಲಿ ವರ್ಲ್ಡ್ ಚಾಂಪಿಯನ್ಸ್ ಆಗಿದ್ದಾರೆ. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕಪ್ತಾನ್ ಆಗಿದ್ದಾಗ ವಿಶ್ವಕಪ್ ಜಯಸಿದ್ದಾರೆ. ವೇರಿ ಸ್ಟೈಲಿಸ್ ಅಂಡ್ ಅಗ್ರೆಸೀವ್ ಕ್ಯಾಪ್ಟನ್ ಸೌರವ್ ಗಂಗೂಲಿ ಟೈಂನಲ್ಲಿ ರನ್ನರ್ ಅಪ್ ಆಗಿದ್ದಾರೆ. ಇನ್ನು ಕರ್ನಾಟಕದ ರಾಹಲ್ ದ್ರಾವೀಡ್ ಮುಂದಾಳತ್ವದಲ್ಲಿಯೂ ಟೀಂ ಇಂಡಿಯಾ ಆಡಿದೆ. ಇದೀಗ ಯಂಗ್ ಆ್ಯಂಡ್ ಡೈನಮಿಕ್ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ವಿಶ್ವಕಪ್ ಆಡ್ತಿರುವ ಟೀಂ ಇಂಡಿಯಾ, ಮೂರನೇ ಬಾರಿಗೆ ಕಪ್ ಎತ್ತಿ ಹಿಡಿಯುವ ಕನಸಿನಲ್ಲಿದೆ.

ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾದಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಕೆ.ಎಲ್ ರಾಹುಲ್, ಕೇದರ್ ಜಾದವ್, ಹಾರ್ದಿಕ್ ಪಾಂಡೆ, ವಿಜಯ್ ಶಂಕರ್, ಅಂಬಟ್ಟಿ ರಾಯ್ಡು, ರಿಶಬ್ ಪಂಥ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಮೊಹಮ್ಮದ್ ಶೆಮಿ, ಯಜುವೇಂದ್ರ ಚಾಹಲ್ ಹಾಗೂ ಜಸ್ಪ್ರಿತ್ ಬ್ರೂಮ್  ಆಡ್ತಿದ್ದಾರೆ.

ಇಂದು ಮಧ್ಯಾಹ್ನ ಭಾರತೀಯ ಕಾಲಮಾನದ ಪ್ರಕಾರ 3 ಗಂಟೆಗೆ ಆಡಲಿದ್ದಾರೆ. ಗೆಲುವಿನೊಂದಿಗೆ ಸರಣಿಯನ್ನ ಶುರು ಮಾಡ್ಲಿ ಅನ್ನೋದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.


TAG


Leave a Reply

Your email address will not be published. Required fields are marked *

error: Content is protected !!