ವಿಶ್ವಾಸವೋ.. ವಿದಾಯವೋ.. ಸುದೀರ್ಘ ಭಾಷಣದ ರಣತಂತ್ರವೋ…

384

ಬೆಂಗಳೂರು:  ರಾಜ್ಯ ರಾಜಕೀಯ ನಾಟಕ ಸುಪ್ರೀಂ ಅಂಗಳಕ್ಕೆ ಹೋಗಿ, ಅಲ್ಲಿ ಎರಡು ಬಾರಿ ನಡೆದ ವಾದ ವಿವಾದದ ಬಳಿಕ ನಿನ್ನೆ ಮಧ್ಯಂತರ ತೀರ್ಪು ನೀಡಲಾಗಿದೆ. ಅದು ದೋಸ್ತಿ ಸರ್ಕಾರಕ್ಕೂ ರೆಬಲ್ ಶಾಸಕರಿಗೂ ಹಾಗೂ ಬಿಜೆಪಿ ನಾಯಕರಿಗೂ ಅತಂತ್ರದ ಪರಿಸ್ಥಿತಿಗೆ ತಳ್ಳಿದೆ.

ಸಿಎಂ ಹೇಳಿದಂತೆ ಇಂದು ವಿಶ್ವಾಸ ಮತಯಾಚನೆ ಮಾಡಬೇಕು. ಆ ಕೆಲಸವನ್ನು ಅವರು ಮಾಡ್ತಾರಾ.. ವಿದಾಯದ ಭಾಷಣ ಮಾಡ್ತಾರ.. ಅಥವ ಸುದೀರ್ಘ ಭಾಷಣದ ನೆಪದಲ್ಲಿ ಸೋಮವಾರದ ತನಕ ಇದನ್ನ ಮೆಗಾ ಧಾರವಾಹಿ ತರ ಎಳೆದುಕೊಂಡು ಹೋಗ್ತಾರಾ ಅನ್ನೋ ಕುತೂಹಲವಿದೆ. ಇದರ ಜೊತೆಗೆ ವಿಶ್ವಾಸ ಮತಯಾಚನೆ ಮಾಡುವ ನೆಪದಲ್ಲಿ ಭಾಷಣಗಳ ಮೇಲೆ ಭಾಷಣಗಳನ್ನ ಮಾಡುತ್ತಾ, ಮುಂಬೈನಲ್ಲಿ ಮುಂದೇನು ಅಂತಾ ಕುಂತಿರೋ ಶಾಸಕರನ್ನ ಹಿಡಿದುಕೊಂಡು ಬರುವ ಪ್ಲಾನ್ ನಡೆದಿದ್ಯಾ ಗೊತ್ತಿಲ್ಲ. ಆದ್ರೆ, ಬಿಜೆಪಿ ಪಾಳೆಯದಲ್ಲಿ ಸರ್ಕಾರ ರಚನೆಯ ಚಟುವಟಿಕೆಗಳು ಜೋರಾಗಿ ನಡೆದಿವೆ.

ದೋಸ್ತಿ ಸರ್ಕಾರದ ಪ್ಲಾನ್ ಗೆ ತಿರುಮಂತ್ರ ನೀಡಲು ಬಿಎಸ್ ವೈ ಪಡೆ ಸಜ್ಜಾಗಿ ನಿಂತಿದೆ. ಮೈತ್ರಿ ಸರ್ಕಾರಕ್ಕೆ ಇವತ್ತೇ ಇತಿಶ್ರೀ ಹಾಡಲಾಗುತ್ತಾ ಅಥವ ಮತ್ತೆ ಮುಂದೂಡುವ ಮೂಲಕ ರಾಜ್ಯದ ಇಡೀ ರಾಜಕೀಯ ನಾಟಕ ಮುಂದುವರೆದುಕೊಂಡು ಹೋಗುತ್ತಾ ಅನ್ನೋ ಟೆನ್ಷನ್ ಇದೆ. ಇದಕ್ಕೂ ಹೆಚ್ಚಾಗಿ ರಾಜ್ಯದ ಜನತೆ ಇದ್ರಿಂದ ರೋಸಿ ಹೋಗಿದ್ದಾರೆ. ಇದನ್ನ ನೋಡಿದ ಜನತೆಗೆ ತಲೆನೋವು ಬಂದಿರಬಹುದು. ಹೀಗಾಗಿ ಇವತ್ತಿನ ಬೆಳವಣಿಗೆಯಲ್ಲಿ ಏನು ಹೈಡ್ರಾಮಾ ನಡೆಯುತ್ತೆ ಅನ್ನೋದು 10.30ಕ್ಕೆ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!