ಕಿಚ್ಚ ಬಿಟೌನ್ ನ ಈ ಬ್ಯೂಟಿ ದೊಡ್ಡ ಅಭಿಮಾನಿಯಂತೆ

371

ನಟ ಕಿಚ್ಚ ಸುದೀಪ ಬರೀ ಸ್ಯಾಂಡಲ್ ವುಡ್, ಸೌಥ್ ಸಿನಿ ದುನಿಯಾ ಮಾತ್ರವಲ್ಲ ಬಾಲಿವುಡ್ ಮಂದಿಗೂ ಗೊತ್ತು. ಹಾಲಿವುಡ್ ಸಿನಿಮಾದವರೆಗೂ ಸುದ್ದಿ ಮಾಡಿದ ಸೂಪರ್ ಸ್ಟಾರ್. ಅಭಿನಯ ಚಕ್ರವರ್ತಿಗೆ ಕೋಟ್ಯಾಂತರ ಜನ ಫ್ಯಾನ್ಸ್ ಇದ್ದಾರೆ. ಆದ್ರೆ, ಕಿಚ್ಚ ಸುದೀಪ ನೆಚ್ಚಿನ ಬ್ಯೂಟಿ ಇರೋದು ಬಿಟೌನ್ ಅಂಗಳದಲ್ಲಿಯಂತೆ.

ನಟ ಸುದೀಪ ಪೈಲ್ವಾನ್ ಶೂಟಿಂಗ್ ಮುಗಿಸಿ ಕೋಟಿಗೊಬ್ಬ 3 ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಇದರ ನಡುವೆ ಸಲ್ಮಾನ ಖಾನ ಜೊತೆ ದಬಾಂಗ್ 3ನಲ್ಲಿಯೂ ನಟನೆ ಮಾಡ್ತಿದ್ದಾರೆ. ಇಷ್ಟೊಂದು ಬ್ಯುಸಿ ನಡುವೆ ಸುದೀಪ ಬಾಲಿವುಡ್ ನಟ ಅಜಯ ದೇವಗನ ಅವರನ್ನ ಭೇಟಿ ಮಾಡಿದ್ರು. ಅದನ್ನ ತಮ್ಮ ಟ್ವೀಟರ್ ನಲ್ಲಿ ಸಹ ಹಂಚಿಕೊಂಡಿದ್ರು.

ಈ ಬಗ್ಗೆ ನಟ ಸುದೀಪ ಪತ್ನಿ ಪ್ರಿಯಾ ಪತಿಯ ಕಾಲೆಳದಿದ್ದಾರೆ. ನನಗೆ ಗೊತ್ತು. ನೀವು ಅಜಯ ದೇವಗನ ಪತ್ನಿ ನಟಿ ಕಾಜೋಲ್ ಅವರನ್ನ ಭೇಟಿಯಾಗಿದ್ರೆ ತುಂಬಾ ಖುಷಿ ಪಡ್ತಿದ್ರಿ ಅಂತಾ ಕಾಮೆಂಟ್ ಮಾಡಿದ್ದಾರೆ. ಯಾಕಂದ್ರೆ ನಟ ಸುದೀಪ, ನಟಿ ಕಾಜೋಲಳ ಬಿಗ್ ಫ್ಯಾನ್ ಅಂತೆ.




Leave a Reply

Your email address will not be published. Required fields are marked *

error: Content is protected !!