ಸಾಯಿ ಪಲ್ಲವಿ ಈ ಸಿನ್ಮಾ ರಿಜೆಕ್ಟ್ ಮಾಡಿದ್ದೇಕೆ?

343

ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಗೂ ಮೊದ್ಲೇ ಸಾಕಷ್ಟು ಸೌಂಡ್ ಮಾಡ್ತಿದೆ. ಕಾರಣ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಲಿಪ್ ಲಾಕ್ ಸೀನ್ ನೋಡಿದ ಹುಡ್ಗರು ಎಂಜಾಯ್ ಮಾಡ್ತಿದ್ದಾರೆ.

ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆಯ ಡಿಯರ್ ಕಾಮ್ರೇಡ್ ಸಿನಿಮಾದ ತುಂಬಾ ಸಾಕಷ್ಟು ಲಿಪ್ ಲಾಕ್ ಸೀನ್ ಗಳಿವೆಯಂತೆ. ಈ ಬಗ್ಗೆ ನಟಿ ಸಾಯಿ ಪಲ್ಲವಿ ಸಹ ಹೇಳಿದ್ದಾರೆ. ಅರೆ, ಅವಳಿಗೆ ಹೇಗೆ ಗೊತ್ತು ಅಂತಾ ಕನ್ ಫ್ಯೂಸ್ ಆಗ್ಬೇಡಿ. ಯಾಕಂದ್ರೆ, ಈ ಮೊದ್ಲು ರಶ್ಮೀಕಾ ಜಾಗದಲ್ಲಿ ಸಾಯಿ ಪಲ್ಲವಿಗೆ ಆಫರ್ ಹೋಗಿತಂತೆ. ಚಿತ್ರದ ಬಗ್ಗೆ ಕೇಳಿದ ಆಕೆ ನೋ ವೇ ಅಂತಾ ಹೇಳಿ ಸ್ಕ್ರೀಪ್ಟ್ ರಿಜೆಕ್ಟ್ ಮಾಡಿದ್ದಾಳೆ.

ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮೀಕಾ ನಡುವೆ ಗುಸುಗುಸು ಶುರುವಾಗಿದ್ದು, ಇದೇ ಕಾರಣಕ್ಕೆ ಸಾಯಿ ಪಲ್ಲವಿ ಬೇಡವೆಂದ ರೋಲ್ ಗೆ ರಶ್ಮೀಕಾಗೆ ಚಾನ್ಸ್ ಕೊಡಿಸಿದ್ದು ವಿಜಯ ಅಂತಾ ಹೇಳಲಾಗ್ತಿದೆ. ಆದ್ರೆ, ಇದನ್ನ ವಿಜಯ ದೇವರಕೊಂಡ ನಿರಾಕರಿಸಿದ್ದಾನೆ.




Leave a Reply

Your email address will not be published. Required fields are marked *

error: Content is protected !!