ಪತ್ನಿಯ ಕಳ್ಳಾಟ ತಿಳಿಯಲು 22 ಕ್ಯಾಮೆರಾ ಇಟ್ಟಿದ್ದ..

932

ಬೆಂಗಳೂರು : ಪತ್ನಿಯ ಮೇಲೆ ಸಂಶಯ ಪಟ್ಟಿದ್ದ ಪತಿಯೊಬ್ಬ ಭರ್ಜರಿ ಪ್ಲಾನ್ ಮಾಡಿದ್ದ. ಅದು ಆಕೆಗೆ ತಿಳಿದು, ಮಗನ ಬ್ಯಾಟ್ ನಿಂದ ಗಂಡನ ತಲೆಗೆ ಹೊಡೆದು ಗಂಭೀರ ಗಾಯಮಾಡಿದ್ದಾಳೆ. ಬೆಂಗಳೂರಿನ ಜಯನಗರದಲ್ಲಿ ಈ ಜೋಡಿ ವಾಸವಾಗಿದೆ. ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ ಪತಿ ಮಹಾಶಯ, ಆಕೆಯ ಚಲನವಲನ  ತಿಳಿಯಲಿ ಬರೋಬ್ಬರಿ 22 ಕ್ಯಾಮೆರಾಗಳನ್ನು ಅಳವಡಿಸಿದ್ದ.

ಇನ್ನು ಪತ್ನಿಯ ಮೊಬೈಲ್ ಗೆ ಸ್ವೈವೇರ್ ಸಹ ಅಳವಡಿಸಿದ್ದ ಆತ, ಯಾಕೆ ಯಾರ ಜೊತೆ ಮಾತ್ನಾಡುತ್ತಾಳೆ ಅನ್ನೋದೆಲ್ಲ ಕೇಳಿಸಿಕೊಳ್ಳುತ್ತಿದ್ದ. ಈ ವಿಚಾರ ತಿಳಿದ ಪತ್ನಿ, ಬ್ಯಾಟ್ ನಿಂದ ಗಂಡನ ತಲೆಗೆ ಹೊಡೆದಿದ್ದಾಳೆ. ಅಡುಗೆ ಕೋಣೆ ಸೇರಿದಂತೆ ಮನೆ ಪ್ರತಿಯೊಂದು ಜಾಗದಲ್ಲಿ ಸ್ಪೈ ಕ್ಯಾಮೆರಾ ಇಟ್ಟಿದ್ದ. ತನ್ನ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳನ್ನ, ಫೋಟೋಗಳನ್ನ ನೋಡುತ್ತಿದ್ದ.

ಒಮ್ಮೆ ಒಬ್ಬನ ಜೊತೆ ಇರುವ ಫೋಟೋ ತೋರಿಸಿ, ಇವನು ಯಾರು ಅಂತಾ ಕೇಳಿ ರಂಪಾಟ ಮಾಡಿದ್ದನಂತೆ. ಅಸಲಿಗೆ ಆತ ಆಕೆಯ ಸೋದರಳಿಯನಾಗಿರುತ್ತಾನೆ. ಹೀಗೆ ಸದಾ ಅನುಮಾನದಿಂದ ನೋಡುವ ಗಂಡನಿಂದ ಡಿವೋರ್ಸ್ ಬೇಕು ಅಂತಿದ್ದಾಳೆ ಪತ್ನಿ. ಇನ್ನು ಪತಿ ಹಾಗೂ ಪತ್ನಿಯ ನಡುವೆ 11 ವರ್ಷಗಳ ಅಂತರವಿದ್ದು, ಇಬ್ಬರನ್ನ ಇದೀಗ ಆಪ್ತ ಸಮಾಲೋಚಕರ ಬಳಿ ಬಿಡಲಾಗಿದೆ.




Leave a Reply

Your email address will not be published. Required fields are marked *

error: Content is protected !!