ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟಿ ಸಾಯಿ ಪಲ್ಲವಿ ನೀಡಿದ ಹೇಳಿಕೆಯನ್ನು ಕೆಲವರು ಉದ್ದೇಶಪೂರ್ವಕವಾಗಿ ವಿವಾದ ಮಾಡಿದ್ದಾರೆ. ಅದರಲ್ಲೂ ಕೆಲ ಮಾಧ್ಯಮದವರು ಆಕೆ ನಟಿ, ಬಾಯಿ ಮುಚ್ಚಿಕೊಂಡು ಒಳ್ಳೆಯ ಸಿನಿಮಾ ಮಾಡಲು ಹೇಳಿ ಅನ್ನೋ ಮೂಲಕ ತಾವು ಏನು ಅನ್ನೋದು ಜಗತ್ತಿಗೆ ತೋರಿಸಿದ್ದಾರೆ. ಹೀಗಾಗಿ ಅಂತಹ ಮಾಧ್ಯಮದವರ ವಿರುದ್ಧ ಸೋಷಿಯಲ್ ವಾರ್ ನಡೆದಿದೆ.
ಇದೀಗ ಬಹುಭಾಷಾ ನಟ ಕಿಶೋರ್ ಅವರು ನಟಿ ಸಾಹಿ ಪಲ್ಲವಿ ಪರ ಬ್ಯಾಟ್ ಬೀಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕಿಶೋರ್, ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದೇನು ಅನ್ನೋದು ಇಲ್ಲಿದೆ ನೋಡಿ.