ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ರಾಣಾ ದಗ್ಗುಬಾಟಿ ಹಾಗೂ ನಟಿ ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಏಪ್ರಿಲ್ 30ರಂದು ಚಿತ್ರ ರಿಲೀಸ್ ಮಾಡಲು ಸಿನಿಮಾ ತಂಡ ನಿರ್ಧರಿಸಿತ್ತು. ಆದ್ರೆ, ಕರೋನಾ 2ನೇ ಅಲೆ ಎದ್ದಿರುವ ಕಾರಣ, ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಈ ಬಗ್ಗೆ ನಿರ್ದೇಶಕ ವೇಣು ಉಡುಗುಲ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಆದ್ರೆ, ಯಾವಾಗ ರಿಲೀಸ್ ಮಾಡುತ್ತೇವೆ ಅನ್ನೋದನ್ನ ಶೀಘ್ರದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.