ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಟಾಲಿವುಡ್ ಅಂಗಳದಲ್ಲಿಯೂ ಮಾದಕ ವಸ್ತುವಿನ ಕಳ್ಳಾಟ ನಡೆದಿದೆ. ಇದರ ಜೊತೆಗೆ ಮನಿ ಲ್ಯಾಂಡ್ರಿಂಗ್ ಸಹ ನಡೆದಿದೆ. ನಾಲ್ಕು ವರ್ಷಗಳ ಹಿಂದಿನ ಪ್ರಕರಣ ಸಂಬಂಧ ನಟ ರಾಣಾ ದಗ್ಗುಬಾಟಿ ಅವರನ್ನು ಇಡಿ ವಿಚಾರಣೆ ನಡೆಸಿದೆ. ಬುಧವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಎದುರು ನಟ ರಾಣಾ ದಗ್ಗುಬಾಟಿ ಹಾಜರಾಗಿದ್ದಾರೆ.
ಆಗಸ್ಟ್ 31ರಂದು ನಿರ್ದೇಶ ಪುರಿ ಜಗನ್ನಾಥ್, ಸೆಪ್ಟೆಂಬರ್ 2ರಂದು ನಟಿ ಚಾರ್ಮಿ ಕೌರ್, ನಟಿ ರಕುಲ್ ಪ್ರೀತಿ ಸಿಂಗ್ ಸೇರಿದಂತೆ 12 ಜನರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ. 2017ರಲ್ಲಿ ಉನ್ನತ ಮಟ್ಟದ ಮಾದಕ ದ್ರವ್ಯ ಜಾಲದ ಕುರಿತಾಗಿ 12 ಜನ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡಿದೆ.