ಮಂಗಳವಾರದಿಂದ ವೈದ್ಯಕೀಯ ಕಾಲೇಜು ಆರಂಭ

311

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಕ್ಲೋಸ್ ಆಗಿದ್ದ ಶಿಕ್ಷಣ ಸಂಸ್ಥೆಗಳು ನಿಧಾನವಾಗಿ ಒಂದೊಂದು ಓಪನ್ ಆಗ್ತಿವೆ. ಈಗಾಗ್ಲೇ ಪದವಿ ಕಾಲೇಜುಗಳು ಆರಂಭವಾಗಿವೆ. ಇದೀಗ ವೈದ್ಯಕೀಯ ಕಾಲೇಜು ಶುರುವಾಗ್ತಿವೆ.

ಡಿಸೆಂಬರ್ 1, ಮಂಗಳವಾರದಿಂದ ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳು ಶುರುವಾಗ್ತಿವೆ. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಯುಜಿಸಿ ಹಾಗೂ ಎನ್ಎಂಸಿ ಮಾರ್ಗಸೂಚಿ ಅಡಿಯಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ.

ಪ್ರಾಯೋಗಿಕ ತರಬೇತಿ ಜೊತೆಗೆ ಬೋಧನೆ ಸಹ ಶುರು ಮಾಡಬೇಕು. ಆನ್ ಲೈನ್ ಹಾಗೂ ಆಫ್ ಲೈನ್ ಎರಡು ಮಾದರಿಯಲ್ಲಿ ನಡೆಸಬಹುದು ಎಂದು ಸೂಚಿಸಲಾಗಿದೆ. ಇನ್ನು ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಪೋಷಕರ ಒಪ್ಪಿಗೆಯನ್ನ ಕಡ್ಡಾಯವಾಗಿ ತರಬೇಕಿದೆ.




Leave a Reply

Your email address will not be published. Required fields are marked *

error: Content is protected !!