ರಾಜ್ಯದಲ್ಲಿ ರೈಲು ಸಂಚಾರ: ಪ್ರಯಾಣಿಕರು ಈ ಕೆಲಸ ಮಾಡ್ಲೇಬೇಕು

893

ಬೆಂಗಳೂರು: ಕರೋನಾ ಲಾಕ್ ಡೌನ್ ನಡುವೆ ರಾಜ್ಯದಲ್ಲಿ ಬಹುತೇಕ ಸಡಿಲಿಕೆಯನ್ನ ಹಂತ ಹಂತವಾಗಿ ಮಾಡಲಾಗ್ತಿದೆ. ಇದೀಗ ರಾಜ್ಯದಲ್ಲಿ ನಾಳೆಯಿಂದ ಎರಡು ವಿಶೇಷ ರೈಲುಗಳು ಸಂಚಾರ ನಡೆಸಲಿವೆ.

ಪ್ರಾಯೋಗಿಕವಾಗಿ ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು-ಬೆಳಗಾವಿ ನಡುವೆ ರೈಲು ಸಂಚರಿಸಲಿವೆ. ಪ್ರಯಾಣ ಮಾಡುವವರು ಕಡ್ಡಾಯವಾಗಿ ಆನ್ ಲೈನ್ ಟಿಕೆಟ್ ಬುಕ್ ಮಾಡಬೇಕು. ಟಿಕೆಟ್ ಕನ್ಫರ್ಮ್ ಆದ್ಮೇಲೆಯೇ ಪ್ರಯಾಣಿಕರು ಸ್ಟೇಷನ್ ಗೆ ಬರಬೇಕು.

ಪ್ರಯಾಣದ ವೇಳೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಡ್ಡಾಯವಾಗಿದೆ. ನಾಳೆ ಬೆಳಗ್ಗೆ 9.30ಕ್ಕೆ ಬೆಂಗಳೂರು-ಮೈಸೂರು ರೈಲು ಸಂಚರಿಸಲಿದ್ದು, ಮಧ್ಯಾಹ್ನ 12.45ಕ್ಕೆ ತಲುಪಲಿದೆ. ಇನ್ನು ಬೆಳಗ್ಗೆ 8ಕ್ಕೆ ಹೊರಡುವ ರೈಲು ಸಂಜೆ 6.30ಕ್ಕೆ ಬೆಳಗಾವಿ ತಲುಪಲಿದೆ. ಆ ಕಡೆಯಿಂದ ಬರುವ ಟ್ರೇನ್ ಸಹ ಇದೆ ಸಮಯಕ್ಕೆ ಹೊರಡಲಿದೆ.




Leave a Reply

Your email address will not be published. Required fields are marked *

error: Content is protected !!