ಸಿಂದಗಿಯಲ್ಲಿ ಅಪರಿಚಿತ ಶವ ಪತ್ತೆ

388

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಮಲಘಾಣ ರಸ್ತೆಯ ಕೆನಾಲ್ ಹತ್ತಿರದ ಬಾವಿಯಲ್ಲಿ ಅಪರಿಚಿತ ಪುರುಷನ ಶವ ಗುರುವಾರ ಪತ್ತೆಯಾಗಿದೆ.

ಶವ ಗುರುತು ಸಿಗದಷ್ಟು ಕೊಳೆತು ಹೋಗಿದೆ. ಹೀಗಾಗಿ ಬಾವಿಯಲ್ಲಿ ಬಿದ್ದು ಬಹಳ ದಿನವಾಗಿದೆ ಎಂದು ಹೇಳಲಾಗ್ತಿದೆ. ಸುಮಾರು 30-35 ವಯಸ್ಸಿನ ವ್ಯಕ್ತಿಯಾಗಿದ್ದು ಈ ಸಾವು ಹೇಗಾಗಿದೆ ಅನ್ನೋದರ ತನಿಖೆಯಾಗ್ತಿದೆ.

ಬಾವಿಯಲ್ಲಿ ಶವ ತೇಲುತ್ತಿರುವ ವಿಷಯ ತಿಳಿದು ಕೂಡಲೇ ಸಿಂದಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!