ಯುಪಿ ಎಲೆಕ್ಷನ್: ಕೈ ಮೊದಲ ಪಟ್ಟಿಯಲ್ಲಿ ಅತೀ ಹಿಂದುಳಿದವರು.. ಮಹಿಳೆಯರು..

405

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲಿಗೆ 125 ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ರಿಲೀಸ್ ಮಾಡಿದೆ. ಅದರಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಸಹ ಇದ್ದಾರೆ.

125 ಅಭ್ಯರ್ಥಿಗಳ ಪಟ್ಟಿಯಲ್ಲಿ 50 ಮಹಿಳೆಯರಿದ್ದಾರೆ. ಶೇಕಡ 40ರಷ್ಟು ಯುವ ಜನತೆ ಇದ್ದಾರೆ. ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಾಯಿ ಆಶಾ ಸಿಂಗ್, ಸಿಎಂ ಭೇಟಿಗೆ ಹೋದಾಗ ಪೊಲೀಸರಿಂದ ಹಲ್ಲೆಗೊಳಾಗದ ಆಶಾ ಕಾರ್ಯಕರ್ತೆ ಪೂನಂ ಪಾಂಡೆ, ಸಿಎಎ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನದಾಫ್ ಜಾಫರ್, ಆದಿವಾಸಿ ಕಾನೂನು ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ರಾಮರಾಜ್ ಗೊಂಡಾ ಸೇರಿದಂತೆ ಅನೇಕರನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!