ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ಸಿನಿ ದುನಿಯಾದ ಹಾಟ್ ಬ್ಯೂಟಿ ಊರ್ವಶಿ ರೌಟೆಲಾ, ಸೋಷಿಯಲ್ ಮೀಡಿಯಾದಲ್ಲಿ ಸಹ ಬ್ಯುಸಿ ಇರ್ತಾಳೆ. ಸದಾ ಒಂದಲ್ಲ ಒಂದು ಫೋಸ್ಟ್ ಮಾಡ್ತಾಳೆ. ಕೆಲವೊಂದು ವಿವಾದಗಳನ್ನ ಸಹ ಮಾಡಿಕೊಳ್ತಾಳೆ. ಇಂಥಾ ನಟಿ ಇದೀಗ ಅಭಿಮಾನಿಗಳಿಗೆ ಖುಷಿ ನೀಡಿದ್ದಾಳೆ.
ಇನ್ಸ್ಟಾಗ್ರಾಮ್ ನಲ್ಲಿ ತನ್ನ ಮುಂದಿನ ಹೊಸ ಚಿತ್ರದ ಬಗ್ಗೆ ಹೇಳಿದ್ದಾಳೆ. ಅದು ಇಂಟರ್ ನ್ಯಾಷನಲ್ ಮೂವಿ ಆಗಿದೆ. ಯೆಸ್, ನಟಿ ಊರ್ವಶಿ ರೌಟೆಲಾ ಫಸ್ಟ್ ಇಂಟರ್ ನ್ಯಾಷನ್ ಸಿನಿಮಾ ಐಸ್ ಲ್ಯಾಡೋಸ್ ಬಗ್ಗೆ ಬರೆದುಕೊಂಡಿದ್ದು, ಸಧ್ಯದಲ್ಲಿಯೇ ರಿಲೀಸ್ ಆಗುತ್ತೆ ಎಂದಿದ್ದಾಳೆ.
ತನ್ನ ಖುಷಿಯನ್ನ ಹಂಚಿಕೊಂಡಿರುವ ಚೆಲುವೆ, ಕನ್ನಡದಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಡಿ ಬಾಸ್ ದರ್ಶನ ಅಭಿನಯದ ಐರಾವತ ಚಿತ್ರದಲ್ಲಿ ಕಾಣಿಸಿಕೊಂಡ ಊರ್ವಶಿ, ಕರ್ನಾಟಕಕ್ಕೂ ಹತ್ತಿರವಾಗಿದ್ದಾಳೆ.