ಊರ್ವಶಿಗೆ ನನ್ನ ಬೆನ್ನು ಹತ್ತದಿರುವ ಸಹೋದರಿ ಎಂದ ಪಂಥ್

159

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕ್ರಿಕೆಟ್ ಲೋಕಕ್ಕೂ ಸಿನಿಮಾ ರಂಗಕ್ಕೂ ಬಿಡಲಾರದ ನಂಟಿದೆ. ಯಾಕಂದರೆ, ಎರಡರಲ್ಲೂ ನೇಮ್, ಫೇಮ್, ಮನಿ ಇದೆ. ಹೀಗಾಗಿ ಕ್ರೀಡಾ ತಾರೆಯರು, ಸಿನಿ ತಾರೆಯರು ಪ್ರೀತಿ, ಪ್ರೇಮ, ಮದುವೆಯಾಗುತ್ತಿರುವ ಉದಾಹರಣೆಗಳಿವೆ. ಹೀಗಾಗಿ ಇಂಡಿಯನ್ ಕ್ರಿಕೆಟ್ ಟೀಂ ಕೀಪರ್ ರಿಷಬ್ ಪಂಥ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲ್ ನಡುವೆ ಕುಚ್ ಕುಚ್ ಇದೆ ಎನ್ನಲಾಗುತಿತ್ತು.

ಪಂಥ್ ಹಾಗೂ ಊರ್ವಶಿ ನಡುವೆ ಸಂಬಂಧವಿದೆ ಅನ್ನೋ ವದಂತಿಗೆ ಪಂಥ್ ತೆರೆ ಎಳೆದಿದ್ದು, ಕೆಲವರು ಜನಪ್ರಿಯತೆಗೆ, ಹೆಡ್ಡಿಂಗ್ ನಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಕಾರಣಕ್ಕೆ ಸುಳ್ಳು ಹೇಳುತ್ತಾರೆ. ನನ್ನ ಬೆನ್ನು ಹತ್ತದಿರುವ ಸಹೋದರಿ ಎಂದು ಪರೋಕ್ಷವಾಗಿ ನಟಿ ಊರ್ವಶಿಗೆ ಟಾಂಗ್ ಕೊಟ್ಟಿದ್ದಾರೆ.

ಇಷ್ಟಕ್ಕೂ ಆಗಿದ್ದು ಏನಂದರೆ, ನಟಿ ಊರ್ವಶಿ ಸಂದರ್ಶನವೊಂದರಲ್ಲಿ ಮಾತನಾಡುವ ಮಿಸ್ಟರ್ ಆರ್.ಪಿ ಅನ್ನೋ ವ್ಯಕ್ತಿ ನನ್ನನ್ನು ಭೇಟಿಯಾಗಲು ಹಾತೊರೆದಿದ್ದ. ನಾನು ಮಲಗಿದ್ದಾಗಲೂ 16-17 ಬಾರಿ ಮಿಸ್ ಕಾಲ್ ಮಾಡಿದ್ದ ಎಂದು ಹೇಳಿದ್ದು ವೈರಲ್ ಆಗಿತ್ತು. ಆರ್.ಪಿ ಅಂದರೆ ರಿಷಬ್ ಪಂಥ್ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಈಗ ಪಂಥ್ ಸಹೋದರಿ ಎಂದು ಹೇಳುವ ಮೂಲಕ ಟಾಂಟ್ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!