ಉಚಿತ ಲಸಿಕೆಗೆ ಇಂದು ಸಂಜೆ 4ಗಂಟೆಯಿಂದ ನೋಂದಣಿ ಶುರು

255

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶ್ಯಾದ್ಯಂತ ಮೇ 1 ರಿಂದ 3ನೇ ಹಂತದ ಲಸಿಕೆ ಅಭಿಯಾನ ಶುರುವಾಗಲಿದೆ. ಹೀಗಾಗಿ ಏಪ್ರಿಲ್ 28ರ ಸಂಜೆ 4 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. 18-45 ವರ್ಷದ ಒಳಗಿನವರು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಲಸಿಕೆ ತಯಾರಿಕ ಕಂಪನಿ ಶೇಕಡ 50ರಷ್ಟು ಕೇಂದ್ರಕ್ಕೆ ಹಾಗೂ ಶೇಕಡ 50ರಷ್ಟು ರಾಜ್ಯಕ್ಕೆ ಪೂರೈಕೆ ಮಾಡಲಿದೆ. ದೇಶದ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೊವಾಕ್ಸಿನ್ ಜೊತೆಗೆ ರಷ್ಯದ ಸ್ಪುಟ್ನಿಕ್ ಸಹ ಶೀಘ್ರದಲ್ಲೇ ಲಭ್ಯವಾಗಲಿದೆ. ಕೋವಿನ್ ಪೋರ್ಟಲ್ ಹಾಗೂ ಆರೋಗ್ಯ ಸೇತು ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.

ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಹೇಗೆ?

ಆರೋಗ್ಯ ಸೇತು ಆ್ಯಪ್ ಮುಖಪುಟದಲ್ಲಿ ಕೋವಿನ್ ಟ್ಯಾಬ್ ಗೆ ಹೋಗಿ

ಇಲ್ಲಿ ನಾಲ್ಕು ಆಯ್ಕೆಗಳು ಇರುತ್ತವೆ. ಅದರಲ್ಲಿ ವ್ಯಾಕ್ಸಿನೇಷನ್ ಟ್ಯಾಬ್ ಗೆ ಹೋಗಿ

ಬಳಿಕ ಹೆಸರು ನೋಂದಾಯಿಸುವುದನ್ನ ಆಯ್ಕೆ ಮಾಡಿ, ಮೊಬೈಲ್ ನಂಬರ್ ಟೈಪ್ ಮಾಡಿ

ಒಟಿಪಿ ಬರುತ್ತೆ. ಅದು ಬಂದ್ಮೇಲೆ ಪುನಃ ಪುರಿಶೀಲಿಸಲು ಮುಂದುವರೆಯುವುದನ್ನ ಆಯ್ಕೆ ಮಾಡಿ

ಇದಾದ ಬಳಿಕ ಫೋಟೋ ಇರುವ ದೃಢೀಕರಣ ಗುರುತಿನ ಚೀಟಿಯನ್ನ ಅಪ್ಲೋಡ್ ಮಾಡಬೇಕು

ಇಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನ ಭರ್ತಿ ಮಾಡಬೇಕಾಗುತ್ತೆ. ಈ ಆ್ಯಪ್ ನಲ್ಲಿ 4 ಜನರ ಹೆಸರನ್ನ ನೋಂದಾಯಿಸಬಹುದು

ರಾಜ್ಯ, ಜಿಲ್ಲೆ, ತಾಲೂಕು ಮೂಲಕ ಲಸಿಕೆ ಸಿಗುವ ಜಾಗಗಳನ್ನ ತಿಳಿದುಕೊಳ್ಳಬಹುದು

ಇದಾದ ನಂತರ ದಿನಾಂಕ ಹಾಗೂ ಲಸಿಕೆ ಸಿಗುವ ಬಗ್ಗೆ ವಿವರ ಸಿಗುತ್ತೆ.

ನಿಮ್ಮ ನೋಂದಣಿ ಪ್ರಕ್ರಿಯೆ ಯಶಸ್ವಿಯಾದ್ಮೇಲೆ ನಿಮ್ಮ ಫೋನ್ ನಂಬರ್ ಗೆ ಮೆಸೇಜ್ ಮೂಲಕ ಸಂದರ್ಶನದ ಮಾಹಿತಿ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!